ರಾಷ್ಟ್ರಕವಿ ಕುವೆಂಪು ಕಾದಂಬರಿಕಾರ, ವಿಮರ್ಶಕ, ಚಿಂತಕ, ನಾಟಕಕಾರ, ಕವಿಯಾಗಿಯೂ ಸಾಹಿತ್ಯ ಲೋಕದ ಗರಿಮೆಯನ್ನು ಹೆಚ್ಚಿಸಿದವರು. ಕನ್ನಡ ಕಥಾ ಸಾಹಿತ್ಯಕ್ಕೆ ಹದಿನೇಳು ಕಥೆಗಳನ್ನು ರಚಿಸಿದ ಅತ್ಯುತ್ತಮ ಕಥೆಗಾರರೂ ಹೌದು.
ಈ ಕತೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಿ ಹೊರತಂದಿರುವ ಎ. ಎಸ್. ವೇಣುಗೋಪಾಲರಾವ್ ಅವರು ಕುವೆಂಪು ಅವರ ಸಣ್ಣ ಕಥೆಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಕುವೆಂಪು ಅವರ ಹಲವು ಕತೆಗಳ ವೈಶಿಷ್ಟ್ಯವೆಂದರೆ ವಿಡಂಬನೆ. ಕೆಲವು ಕತೆಗಳಲ್ಲಿ ಗಂಡು ಹೆಣ್ಣುಗಳ ಪ್ರಣಯದ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಗುರುತಿಸಬಹುದು.
ಈಶ್ವರನೂ ನಕ್ಕಿರಬೇಕು, ಮಾಯದ ಮನೆ, ಕ್ರಿಸ್ತನಲ್ಲ, ಪಾದ್ರಿಯ ಮಗಳು, ಶ್ರೀಮನ್ಮೂಕವಾಗಿತ್ತು, ಮೀನಾಕ್ಷಿಯ ಮನೆ ಮೇಷ್ಟರು, ವೈರಾಗ್ಯದ ಮಹಿಮೆ ಇನ್ನು ಮುಂತಾದ ಕತೆಗಳ ಕುರಿತು ಲೇಖಕರು ’ ಶ್ರೀ ಕುವೆಂಪು ಅವರ ಸಣ್ಣ ಕಥೆಗಳು’ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ಕೃಷಿ ಮಾಡಿರುವ ಡಾ. ಎ.ಎಸ್. ವೇಣುಗೋಪಾಲರಾವ್ ಅವರು ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ ಲಲಿತ ಪ್ರಬಂಧಗಳನ್ನು ನೀಡಿದ್ದಾರೆ. ಬೆಂಗಳೂರಿನ ಶ್ರೀ ರಮಣ ಸೆಂಟರ್ ಫಾರ್ ಲರ್ನಿಂಗ್ ಸಂಸ್ಥೆಯು ರಮಣ ಮಹರ್ಷಿ ಅವರ ಸಂದೇಶಗಳನ್ನು ಅನುವಾದಿಸಿ ಭಗವಾನ್ ಶ್ರೀರಮಣ ಮಹರ್ಷಿಗಳು ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ. ...
READ MORE