ಶೇಕ್ಸಪಿಯರ್: ಕನ್ನಡ ಸ್ಪಂದನ

Author : ನಟರಾಜ ಹುಳಿಯಾರ್

Pages 330

₹ 150.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560103
Phone: 127 - 23183311, 23183312

Synopsys

 ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2014ರಲ್ಲಿ ನಡೆಸಿದ ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳನ್ನು ಈ  ಕೃತಿಯೂ ಒಳಗೊಂಡಿದೆ. ರಂಗಾಯಣವು ಶೇಕ್ ಸ್ಪಿಯರ್ ಕುರಿತು ನಡೆಸಿದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಕೆಲವು ಪ್ರಬಂಧಗಳು ಇದರ ಜೊತೆಗೆ ಕೆಲವು ಮಹತ್ವದ ಚಿಂತಕರು ಬರೆದ ವಿಮಾರ್ಶಾ ಬರಹಗಳು ಸೇರಿವೆ. ಶೇಕ್ ಸ್ಪಿಯರ್ ನಾಟಕಗಳಲ್ಲಿ ನಟಿಸಿದ ನಟ ನಟಿಯರು ನಾಟಕ, ಸಿನಿಮಾಗಳ ನಿರ್ದೇಶಕರು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಶೇಕ್ ಸ್ಪಿಯರ್ ಕೃತಿಗಳನ್ನು ಪಾಠ ಮಾಡಿದವರ ಬರಹಗಳನ್ನು ’ಶೇಕ್ಸಪಿಯರ್: ಕನ್ನಡ ಸ್ಪಂದನ  ’ ಎಂಬ ಕೃತಿಯಲ್ಲಿ ಲೇಖಕ  ನಟರಾಜ್ ಹುಳಿಯಾರ್‌ ನೀಡಿದ್ದಾರೆ. 

ಇಂದು ಬಳಸುತ್ತಿರುವ ನವಚಾರಿತ್ರಿಕವಾದಿ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ, ತೌಲನಿಕ ವಿಮರ್ಶೆ, ಪಠ್ಯ ಕೇಂದ್ರಿತ ವಿಮರ್ಶೆ, ರಂಗ ಪಠ್ಯ ವಿಮರ್ಶೆ ಮೊದಲಾಗಿ ಹಲವು ದಿಕ್ಕುಗಳಿಂದ ಶೇಕ್ ಸ್ಪಿಯರ್ ಕೃತಿಗಳನ್ನು ನೋಡಿರುವ ವಿಮರ್ಶಾ ಬರಹಗಳು,  21ನೇ ಶತಮಾನದ ಕನ್ನಡ ವಿಮರ್ಶೆಯ ಸ್ವರೂಪವನ್ನು ಕನ್ನಡ ಸೃಜನಶೀಲ ಲೋಕ ಶೇಕ್ ಸ್ಪಿಯರ್ ನನ್ನು ಗ್ರಹಿಸಿರುವ ಬಗೆಗಳನ್ನು19ನೇ ಶತಮಾನದ ಕೊನೆಯಿಂದ 20ನೇ ಶತಮಾನದವರೆಗೂ ಶೇಕ್ ಸ್ಪಿಯರ್ ಕೃತಿಗಳನ್ನು ಕುರಿತ ಕನ್ನಡದಲ್ಲಿ ಪ್ರಕಟವಾದ ಬರಹಗಳನ್ನು ಈ ಕೃತಿ ಒಳಗೊಂಡಿದೆ. 

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books