ಕವಿಗಳ ಭಾಷಿಕ ವೈಶಿಷ್ಟ್ಯಗಳನ್ನು ಆಯಾ ಕವಿಗಳ ಶೈಲಿ ಎಂದು ವಿವರಿಸುವುದು ವಾಡಿಕೆ. ಆದರೆ ಶೈಲಿಯ ಅಧ್ಯಯನವನ್ನೇ ಮುಖ್ಯ ಉದ್ದೇಶವಾಗಿಸಿಕೊಂಡ ಅಧ್ಯಯನ ಶಿಸ್ತೊಂದು 1950ರ ದಶಕದಿಂದ ಈಚೆಗೆ ಬೆಳೆದಿದೆ. ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯಲ್ಲಿ ಈ ಅಧ್ಯಯನ ಶಾಖೆಯನ್ನು 'Stylistics' ಎಂದು ಕರೆಯಲಾಗಿದೆ. ಕನ್ನಡ ವಿಮರ್ಶೆಯಲ್ಲಿ ಶೈಲಿ ವಿಜ್ಞಾನ ಮತ್ತು ಶೈಲಿಶಾಸ್ತ್ರ ಎಂಬ ಎರಡು ಪರ್ಯಾಯ ಪ್ರಯೋಗಗಳಿವೆ. ವಿವರಣಾತ್ಮಕವಾಗಿ ಕೆಲವೊಮ್ಮೆ ’ಶೈಲಿಯ ಅಧ್ಯಯನ’ ಎಂದು ಕೂಡ ಕರೆಯಲಾಗಿದೆ. ಆದರೆ ಶೈಲಿಶಾಸ್ತ್ರ ಪದ ಬಳಕೆಯೇ ಸರಿ ಎಂಬ ನಿರ್ಣಯಕ್ಕೆ ವಿದ್ವಾಂಸರು ಬಂದು ಅದನ್ನೇ ಬಳಸಲಾಗುತ್ತಿದೆ.
ವಿದ್ವಾಂಸ ಕೆ.ವಿ. ನಾರಾಯಣ ಅವರ ’ಶೈಲಿಶಾಸ್ತ್ರ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ’ಸಾಹಿತ್ಯ ಪಾರಿಭಾಷಿಕ ಮಾಲೆ’ ಹೆಸರಿನಲ್ಲಿ 1990ರಲ್ಲಿ ಪ್ರಕಟಿಸಿತ್ತು. 'ಅಭಿನವ' 2017ರಲ್ಲಿ ಅದನ್ನು ಮರುಮುದ್ರಿಸಿದೆ.
ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...
READ MORE