ಸಾಂಗತ್ಯ

Author : ಅಗ್ರಹಾರ ಕೃಷ್ಣಮೂರ್ತಿ

Pages 700

₹ 1000.00




Year of Publication: 2021
Published by: ಕಿರಂ ಪ್ರಕಾಶನ
Address: ನಂ.173, 7ನೇ ಮುಖ್ಯ ರಸ್ತೆ, 24ನೇ ಸಿ ಕ್ರಾಸ್‌, ನಾಗರಬಾವಿ ಮುಖ್ಯ ರಸ್ತೆ, ಗೋವಿಂದರಾಜನಗರ ಬೆಂಗಳೂರು-560079.
Phone: 9844467351

Synopsys

'ಸಾಂಗತ್ಯ' ಕೃತಿಯು ಡಾ ಕರೀಗೌಡ ಅವರ ಬದುಕು ಕೃತಿಗಳ ವಿಮರ್ಶಾ ಪುಸ್ತಕವಾಗಿದ್ದು ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ 135ಕ್ಕೂ ಹೆಚ್ಚು ಲೇಖನಗಳಿವೆ. ಕನ್ನಡದ ಗಣ್ಯ ಕವಿಗಳು, ಕತೆಗಾರರು, ಜಾನಪದ ವಿದ್ವಾಂಸರು, ಅನುವಾದಕರು, ವಿಮರ್ಶಕರು, ಇತಿಹಾಸಕಾರರು, ನಾಟಕಕಾರರು, ಕುಲಪತಿಗಳು, ಇನ್ನಿತರ ಕ್ಷೇತ್ರಗಳಲ್ಲಿನ ಹೆಸರಾಂತ ಮತ್ತು ಹೊಸ ತಲೆಮಾರಿನ ಲೇಖಕ ಲೇಖಕಿಯರ ಪ್ರೀತಿ ವಿಶ್ವಾಸಗಳಿಂದ ಕರೀಗೌಡರ ವ್ಯಕ್ತಿತ್ವದ ಬಗ್ಗೆಯೂ, ವಸ್ತುನಿಷ್ಠತೆಯಿಂದ ಅವರ ಕೃತಿಗಳ ಬಗ್ಗೆಯೂ ಬರೆದಿದ್ದಾರೆ. ಇಲ್ಲಿನ ಲೇಖನಗಳನ್ನು ಸಾಹಿತ್ಯ ವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆ ಎಂಬ ಒಂಬತ್ತನೇ ಪರ್ವದಲ್ಲಿ ಉಲ್ಲೇಖಿಸಲಾಗಿದೆ. ಆ ಲೇಖನಗಳ ಆಯ್ಕೆಗಳನ್ನು ಗಮನಿಸಿದರೆ ಕರೀಗೌಡರಲ್ಲಿರುವ ಸಾಹಿತ್ಯ ಮತ್ತು ಸಂಸ್ಕೃತಿಯ ಬಗೆಗಿರುವ ಸಧಬಿರುಚಿ ಎದ್ದು ಕಾಣತ್ತದೆ ಎಂದು ಲೇಖಕ ಅಗ್ರಹಾರ ಕೃಷ್ನಮೂರ್ತಿ ಅವರು ತಮ್ಮ ಸಂಪಾದಕರ ನುಡಿಯಲ್ಲಿ ಹೇಳಿದ್ದಾರೆ. 1959ರಿಂದ 2008ರವರೆಗಿನ ಐವತ್ತು ವರ್ಷಗಳ ಅವಧಿಯಲ್ಲಿ ಬಂದಂತಹ ವಿಮರ್ಶಾ ವಲಯದಿಂದ ಹದಿನೇಳು ಲೇಖನಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಇವುಗಳ ಕಾಲಾವಧಿ, ವಸ್ತು ಹರಹು ವಿಸ್ತಾರವಾದುದು ಕನ್ನಡ ಸಾಹಿತ್ಯ, ವಿಮರ್ಶೆ ಸಂಸ್ಕೃತಿ ಚಿಂತನಾಲೋಕದಿಂದ ವಿವಿಧ ಆಯಾಮಗಳನ್ನೂಬೆಳವಣಿಗೆಯ ಸರ್ವಕಾಲೀಕತೆಯನ್ನು ಇದು ಪ್ರತಿಪಾದಿಸುತ್ತದೆ ಎಂದು ಈ ಕೃತಿಯ ಕುರಿತು ಆರಂಭದಲ್ಲಿ ವಿವರಿಸಲಾಗಿದೆ.

About the Author

ಅಗ್ರಹಾರ ಕೃಷ್ಣಮೂರ್ತಿ
(18 January 1953)

ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953 ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ  ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ  ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ...

READ MORE

Related Books