ಸಂಚಯ

Author : ಹಾ.ಮಾ. ನಾಯಕ

Pages 212

₹ 4.00




Year of Publication: 1969
Published by: ಶಾರದ ಮಂದಿರ
Address: ಶಾರದ ಮಂದಿರ, ರಾಮಯ್ಯರ್ ರಸ್ತೆ , ಮೈಸೂರು-4

Synopsys

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಹಾ.ಮಾ.ನಾಯಕರ ಲೇಖನಗಳ ಸಂಗ್ರಹವಾಗಿ ’ಸಂಚಯ’ ಕೃತಿ ಹೊರಬಂದಿದೆ.

ಕನ್ನಡ ನುಡಿಯಲ್ಲಿ ವಿದ್ವತ್ತು, ಸಾಹಿತ್ಯದ ವಿಷಯಕ್ಕೆ ಜನರಲ್ಲಿ ಸದಭಿರುಚಿ ಇವುಗಳನ್ನು ಬೆಳೆಸುವ ಸಲುವಾಗಿ ಕನ್ನಡ ಕವಿ ಕಾವ್ಯಮಾಲೆ ಯೋಜನೆಯನ್ನು ರೂಪಿಸಲಾಗಿತ್ತು. ಈ ಮಾಲಿಕೆಯಲ್ಲಿ ಪ್ರಕಟವಾದ ಕೃತಿ ಇದು. ಇಲ್ಲಿನ ಲೇಖನಗಳಲ್ಲಿ ಕೊನೆಯವೆರಡು ಅನುವಾದಗಳಿವೆ. ಇಬ್ಬರು ಐರೋಪ್ಯ ಕಲಾವಿದರು ಎಂಬುದರಲ್ಲಿ ‘ಗಿಯೊಟ್ಟೊ’ ಎಂಬುದು ಮಾಲ್ಕಂ ವಾಗನ್ ಅವರ ‘ಗಿಯೊಟ್ಟೊ ಪೇಂಟೆಂಡ್ ವಾಟ್ ಹಿ ಸಾ’ ಎಂಬ ಲೇಖನ. ‘ಚೊಪಿನ್’ ಎಂಬುದು ಕ್ಲೇರ್ ವಾನ್ ಅಸ್ ದಾಲ್ ಅವರ ‘ಚೊಪಿನ್ ಪೊಯೆಟ್ ಆಫ್ ದಿ ಪಿಯಾನೊ’ ಎಂಬ ಲೇಖನ . ಸಿಕ್ ಜನಾಂಗದ ಧರ್ಮ, ದೇವರು- ಶ್ರೀ ಕುಶವಂತ ಸಿಂಗ್ ಅವರ ‘ದಿ ಸಿಕ್ ಫೇಯ್ತ್ ಅಂಡ್ ಪ್ರಾಕ್ಟೀಸ್’ ಎಂಬ ಲೇಖನವನ್ನೂ ಸಿಖ್ಖರ ಮುಂಜಾನೆಯ ಪ್ರಾರ್ಥನೆಯ ಮೇಲಿನ ಟಿಪ್ಪಣಿಯನ್ನು ಆಧರಿಸಿದ್ದು, ಅವರೇ ಇಂಗ್ಲಿಷಿಗೆ ಅನುವಾದಿಸಿರುವ ಪ್ರಾರ್ಥನೆಗಳನ್ನೂ ಇಲ್ಲಿ ಉಪಯೋಗಿಸಿಕೊಳ್ಳಲಾಗಿದೆ. 

About the Author

ಹಾ.ಮಾ. ನಾಯಕ
(12 September 1931 - 10 November 2000)

ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...

READ MORE

Related Books