ಹಿರಿಯ ಪತ್ರಕರ್ತ-ಅನುವಾದಕ-ಸಾಹಿತಿ ಜಿ.ಎನ್ ರಂಗನಾಥ ರಾವ್ ಅವರ ’ಸಮುಚ್ಚಯ’ ಕೃತಿಯು ವಿಮರ್ಶಾ ಸಂಪುಟವಾಗಿದೆ. ಹೊಸಗನ್ನಡ ಸಾಹಿತ್ಯದ ಸಾಮಾಜಿಕ ವಾಸ್ತವ ಎಂಬ ಉಪಶೀರ್ಷಿಕೆ ಇದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಲ್.ಎಸ್. ಶೇಷಗಿರಿ ರಾವ್ ಅವರು, ಥಿಯರಿಗಳಲ್ಲಿ ಮುಳುಗದೆ ಒಂದು ಕೃತಿಯನ್ನು ಹಿಡಿದು ತಮ್ಮ ಪ್ರತಿಕ್ರಿಯೆಯನ್ನು ಅದರ ಕಾರಣಗಳನ್ನೂ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಒಂದಿಡೀ ಸಾಹಿತ್ಯದಲ್ಲಿ ಮೌಲ್ಯ ನಿರ್ಣಯದ ಸಮಸ್ಯೆಯನ್ನು ಬಿಡಿಸುತ್ತ ಸಾಗುವ ರಂಗನಾಥರಾಯರದು ಸರಿಯಾದ ವಿಮರ್ಶಕ ಮನೋಧರ್ಮ ಎಂದೆನ್ನಬಹುದು. ಉದ್ವೇಗವಿಲ್ಲದೇ ಖಚಿತವಾಗಿ ಕೃತಿಯ ಸ್ವರೂಪವನ್ನು ಕಾಣಲು ಯತ್ನಿಸುವ ಪ್ರಾಮಾಣಿಕ ಮನೋಧರ್ಮ ಇಲ್ಲಿಯದು. ಇಡೀ ಕೃತಿಯನ್ನು ಸಾವಯವವಾಗಿ ಕಂಡು ವಿವರಗಳ ಸಾಂಗತ್ಯವನ್ನು ಗಮನಿಸಿ, ಕೃತಿಯನ್ನು ಅರ್ಥೈಸುವ ವಿಮರ್ಶೆಯ ರೀತಿ ಇಲ್ಲಿಯದು. ಈ ಕೃತಿಯಲ್ಲಿಓದುವವರಿಗೆ ಸಂತೋಷ ಉಂಟು, ಪ್ರಚೋದನೆಯ ಪ್ರಯೋಜನವೂ ಇದೆ ’ ಎಂದು ಪ್ರಶಂಸಿಸಿದ್ದಾರೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MORE