’ಸಾಹಿತ್ಯ ಚಳುವಳಿಗಳು' ಪುಸ್ತಕವನ್ನು ಅಧ್ಯಾಪಕ-ಯುವ ವಿದ್ವಾಂಸ ಶ್ರೀಧರ ಹೆಗಡೆ ಭದ್ರನ್ ಅವರು ಸಂಪಾದಿಸಿದ್ದಾರೆ.
ಚಲನವಲನ ಪದದ ತದ್ಭವವಾದ 'ಚಳುವಳಿ' ಇಂಗ್ಲಿಷ್ನ Movement ಪದಕ್ಕೆ ಸಮಾನವಾದ ಅರ್ಥದಲ್ಲಿ ಬಳಕೆಯಲ್ಲಿದೆ. ಅಂದರೆ ವ್ಯವಸ್ಥೆಯ ಬದಲಾವಣೆಗಾಗಿ ನಡೆಯುವ ಚಲನಶೀಲವಾದ ಆಂದೋಲನವನ್ನು 'ಚಳುವಳಿ' ಎಂದು ಕರೆಯಬಹುದು. ಇದು ಸಾಮಾನ್ಯವಾಗಿ ಸಮಷ್ಟಿ ಪ್ರಜ್ಞೆಯ ಫಲ. ಬಹುಶಃ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಪಾಶ್ಚಿಮಾತ್ಯ ಸುಸಂಘಟಿತ ಸಮಾಜದ ಪರಿಭಾಷೆಯಾದ ಚಳುವಳಿ ನಮ್ಮನ್ನು ಪ್ರಭಾವಿಸಿದ್ದು. ಹಾಗೆ ನೋಡಿದರೆ ಅದು ರಾಜಕೀಯ, ಸಾಮಾಜಿಕ, ಧಾರ್ಮಿಕ ವಲಯಗಳಿಗೆ ಸಂಬಂಧಿಸಿದ್ದೇ ಹೊರತು; ಶುದ್ದ ಸಾಹಿತ್ಯಕ ಪರಿಕಲ್ಪನೆಯೇನಲ್ಲ. ಆದರೂ ಸಾಹಿತ್ಯ ಮತ್ತು ಚಳುವಳಿಗಳಿಗಿರುವ ಸಂಬಂಧ ಅವಿನಾಭಾವ, ಕನ್ನಡ ಸಾಹಿತ್ಯ ಚಳುವಳಿಗೆ ಸಂಬಂಧಿಸಿದ ಲೇಖನಗಳು ಇಲ್ಲಿವೆ.
ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕಾಣಿಸಿಕೊಂಡ ಸಾಹಿತ್ಯಕ ಚಳವಳಿಗಳ ಬಗ್ಗೆ ಪರಿಚಯಿಸುವ ಹೊತ್ತಿಗೆ ಇದು ಲೇಖಕರಾದ ಶ್ರೀಧರ ಹೆಗಡೆ ಭದನ ಅವರೂ ಸೇರಿದಂತೆ ಎಚ್. ಎಸ್. ರಾಘವೇಂದ್ರರಾವ್, ಚಿ. ಶ್ರೀನಿವಾಸರಾಜು, ನರಹಳ್ಳಿ ಬಾಲಸುಬ್ರಹ್ಮಣ್ಯ, ಪುರುಷೋತ್ತಮ ಬಿಳಿಮಲೆ, ಅರವಿಂದ ಮಾಲಗು ಅವರು ಬರೆದು ಲೇಖನಗಳು ಇಲ್ಲಿವೆ. ನವೋದಯ, ಪ್ರಗತಿಶೀಲ, ನವ್ಯತೆಯ ಪರಿಕಲ್ಪನೆ, ಬಂಡಾಯ ಮತ್ತು ದಲಿತ ಸಾಹಿತ್ಯ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...
READ MORE