ಸಾಹಿತ್ಯ ಪರಿಸರ

Author : ಶಿವರಾಮಯ್ಯ

Pages 100




Published by: ವೈಚಾರಿಕ ಪುಸ್ತಕ ಮಾಲೆ
Address: ಅನುವನ ಹಳ್ಳಿ, ಶಿವನಿ, ಚಿಕ್ಕಮಗಳೂರು 577549

Synopsys

ಈ ಸಂಕಲನದಲ್ಲಿರುವ ಪ್ರಾಚೀನ ಮತ್ತು ಅರ್ವಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಒಟ್ಟಾರೆ ಕನ್ನಡ ವಿಮರ್ಶೆಯ ಮುಂದಿನ ಗುರಿಗಳನ್ನು, ಅದರ ಅಗತ್ಯತೆಗಳನ್ನು ಒತ್ತಿ ಹೇಳುತ್ತದೆ. ಈ ಬರಹಗಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಮಾಸಿಕಗಳಲ್ಲಿ ಕಾಣಿಸಿಕೊಂಡವ್ವಗಳಾದುದರಿಂಗ ಒಟ್ಟಾರೆ ಬದುಕಿನ ತರೆದ ಮನಸ್ಸಿನ ಪ್ರತಿಕ್ರಿಯೆಗಳಾಗಿವೆ. ಇಲ್ಲಿನ ಲೇಖನಗಳು ಪ್ರಧಾನ ಸಂಸ್ಕೃತಿಯ ಉಪಟಳ, ಅದರ ತುಳಿತಕ್ಕೆ ಸಿಲುಕಿ ಕಂಗಾಲಾದ ಅಧೀನ ಸಂಸ್ಕೃತಿಯ ಸ್ಥಿತಿ, ಇಂಥ ಸ್ಥಿತಿಯ ಮುಖೇನ ಅಧೀನವೇ ಪ್ರಧಾನವಾಗಬೇಕೆಂಬ ಬಯಕೆ, ಇವುಗಳ ಶೋಧನೆ 'ಸಾಹಿತ್ಯ ಪರಿಸರ'ದ ಎಲ್ಲ ಬರಹಗಳ ಹಿಂದಿನ ಆಶಯವಾಗಿದೆ. ಮುಖ್ಯವಾಗಿ ಇವತ್ತಿನ ಕನ್ಮಡ ವಿಮರ್ಶೆ ಹೆಚ್ಚು ಗೊಂದಲವಾಗುತ್ತಿದೆ. ಅದಕ್ಕೆ ಕಾರಣಗಳೇನು ? ಅದರಿಂದ ಬಿಡಿಸಿಕೊಳ್ಳುವುದು ಹೇಗೆ ? ಎಂಬಂಥ ಪ್ರಶ್ನೆಗಳಿಗೆ ಸವಾಲಿನ ರೀತಿಯಲ್ಲಿ ಉತ್ತರಿಸುವ ಲೇಖನಗಳು ಈ ಕೃತಿಯಲ್ಲಿದೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books