ಸಾರೂಪ್ಯ

Author : ಶ್ರೀಧರ ಹೆಗಡೆ ಭದ್ರನ್‍

Pages 136




Year of Publication: 2011
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಶ್ರೀಧರ ಹೆಗಡೆ ಭದ್ರನ್ ಹೊಸ ತಲೆಮಾರಿನ ಭರವಸೆಯ ವಿಮರ್ಶಕರೂ, ಚಿಂತಕರೂ ಆಗಿದ್ದಾರೆ. ಆಳವಾದ ವಿದ್ವತ್ತು, ಸತತ ಪರಿಶ್ರಮ, ವಿನಯವಂತಿಕೆಗಳು ಅವರ ವಿಚಾರ ವಿಮರ್ಶೆಗಳಲ್ಲಿವೆ.  ಸಂಸ್ಕೃತ, ಹಳಗನ್ನಡ, ಆಧುನಿಕ ಸಾಹಿತ್ಯವನ್ನೂ ಒಳಗೊಂಡಂತೆ ಜೈನ ಸಾಹಿತ್ಯ, ಭಾಷೆ ಪರಂಪರೆಗಳನ್ನು ತಲಸ್ಪರ್ಷಿಯಾಗಿ ಅಧ್ಯಯನ ಮಾಡಿರುವ ಶ್ರೀಧರ್ ಅವರು ಸೂಕ್ಷ್ಮ ಸಂವೇದನಾಶೀಲರೂ, ಸಜ್ಜನ ಸ್ವಭಾವದವರೂ ಆಗಿದ್ದಾರೆ.

’ಸಾರೂಪ್ಯ’ ಕೃತಿಯು ಜೈನ ಸಂಸ್ಕೃತಿ ಸಾಹಿತ್ಯ ಭಾಷೆ ಮತ್ತು ಇತಿಹಾಸವನ್ನು ಕುರಿತ ಅಪರೂಪದ  ಲೇಖನಗಳನ್ನು ಸಂಗ್ರಹಿಸಿದ ಪುಸ್ತಕವಾಗಿದೆ.

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books