ಡಾ. ವಿಜಯಶ್ರೀ ಸಬರದ ಅವರ ವಿಮರ್ಶಾ ಸಂಕಲನ ‘ಸಾಹಿತ್ಯ ಸಂವಹನ’. 2002ರಲ್ಲಿ ಪ್ರಥಮ ಮುದ್ರಣಕಂಡ ಈ ಕೃತಿ 2014ರಲ್ಲಿ ಮರುಮುದ್ರಣಗೊಂಡಿದೆ. ಈ ಕೃತಿಗೆ ಎ.ಜೆ. ಸರಸ್ವತಿ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ಇತಿಹಾಸದುದ್ದಕ್ಕೂ ಮಹಿಳೆಯನ್ನು ಶೋಷಿಸುತ್ತ ಬಂದಿರುವುದನ್ನು ವಿಜಯಶ್ರೀಯವರು ತಮ್ಮ ವಿಮರ್ಶಾ ಲೇಖನಗಳಲ್ಲಿ ಬಿಚ್ಚಿಟ್ಟಿದ್ದಾರೆ. ಹರಿಶ್ಚಂದ್ರನ ಸತ್ಯಪರೀಕ್ಷೆಗೆ ವಿಶ್ವಾಮಿತ್ರನು ಹೊಲತಿಯರನ್ನು ಬಳಸಿಕೊಳ್ಳುವ ಸಂದರ್ಭವನ್ನು ಸ್ತ್ರೀಶೋಷಣೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವುದು ಅರ್ಥಪೂರ್ಣವಾಗಿದೆ. ಆಧುನಿಕ ಕವಯತ್ರಿಯರ ಬಹುಪಾಲು ಕವಿತೆ-ಕತೆ- ಕಾದಂಬರಿಗಳನ್ನು ವಿಜಯಶ್ರೀ ತಮ್ಮ ಲೇಖನಗಳಲ್ಲಿ ವಿಶ್ಲೇಷಿಸಿದ್ದಾರೆ.ಲೇಖಕಿಯರ ಮಿತಿಗಳನ್ನು ಗುರಿತಿಸುತ್ತ ಅವರು ಬೆಳೆಯಬೇಕಾಗಿರುವ ದಾರಿಯನ್ನೂ ಸೂಚಿಸಿರುವುದು ವಿಜಯಶ್ರೀಯವರ ವಿಮರ್ಶೆಯ ಬಹುದೊಡ್ಡ ಮಾದರಿಯಾಗಿದೆ ಎಂದಿದ್ದಾರೆ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE