‘ಸಾಹಿತ್ಯ ಮತ್ತು ವಿಮರ್ಶೆ’ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಅವರ ವಿಮರ್ಶಾ ಕೃತಿ. ಕೃತಿಯ ಕುರಿತು ವಿವರಿಸುತ್ತಾ ಒಂದು ಜನಾಂಗ ಮುಂದುವರಿದಿರುವುದಕ್ಕೆ ಸಾಹಿತ್ಯದ ನಿರಂತರವಾದ ಅಭಿವೃದ್ಧಿಯ ಮುಖ್ಯ ಲಕ್ಷಣವು. ಯಾವು ಜನಾಂಗ ತನ್ನ ಸಾಹಿತ್ಯವನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟು ಕೊಂಡಿಲ್ಲವೋ ಆ ಜನಾಂಗ ತನ್ನ ಕರ್ತವ್ಯದಲ್ಲಿ ಭಂಗವನ್ನು ಪಡೆದಿದೆ. ಇಂದು ಸಾಹಿತ್ಯವಿಲ್ಲದಿದ್ದರೇನು ಹಿಂದೆ ನಮ್ಮವರು ಬರೆದಿದ್ದರು ಎಂದರೆ ಸಾಲದು, ಸಾಹಿತ್ಯಲತೆ ಎಲ್ಲ ಹೊತ್ತೂ ಹೂ ಬಿಡದೇ ಇರಬಹುದು. ಆದರೆ ಯಾವಾಗಲೂ ಜೀವದಿಂದ ತುಂಬಿರಬೇಕು. ತಳಿರೋ, ಹಣ್ಣೋ ಯಾವುದೋ ಇಲ್ಲದಿದ್ದರೆ ಮುಂದಿನ ತಳಿರಿಗಾಗಿ ಕೊನೆಗಳನ್ನು ಸರಿ ಮಾಡಿಕೊಳ್ಳುವುದೋ, ಈ ರೀತಿಯ ಅದರ ಕರ್ತವ್ಯ ನಿರ್ವಾಹದ ಯಾವ ಒಂದು ಲಕ್ಷಣದಿಂದಲಾದರೂ ಕೂಡಿರಬೇಕು. ಹೀಗಿಲ್ಲದಿದ್ದರೆ ಅದು ಬಾಡುತ್ತಿದೆ ಎಂದೇ ಅರ್ಥ. ಇದು ಜನಾಂಗದ ದುರವಸ್ಥೆಯ ಕ್ರೂರ ಚಿಹ್ನೆಗಳಲ್ಲಿ ಅತಿ ಕ್ರೂರವಾದುದು. ಉಳಿಯಬೇಕೆಂಬ ಜನಾಂಗವು ಇಂಥ ಅವಸ್ಥೆಯಿಂದ ಹೇಗಾದರೂ ಗುಣವನ್ನು ಹೊಂದಬೇಕು. ಹೊಂದದಿದ್ದರೆ ಅದು ಜನಾಂಗಗಳ ಸಮುದಾಯದಲ್ಲಿ ಕರ್ತವ್ಯ ಭ್ರಷ್ಟ್ರವಾಗಿ ದುರ್ಗತಿಯಲ್ಲಿ ಅವಸಾನವನ್ನು ಹೊಂದುವುದು. ವಿಮರ್ಶಕನಿಗೆ ಶಿಕ್ಷಣಬೇಕು, ಅನುಭವ ಬೇಕು, ಈ ಅರ್ಥವನ್ನು ಆತ ಗಳಿಸಿಕೊಳ್ಳಬೇಕಾದರೆ ಆತ ಭಾಷೆಯ ಮೂಲಕ ಸಾಗಬೇಕಾಗುತ್ತದೆ. ಒಂದು ಸಾಹಿತ್ಯ ಕೃತಿಯಲ್ಲಿ ಏನೇ ಆದರೂ ಅದು ಭಾಷೆಯ ಮೂಲಕವೇ ಸಂಭವಿಸಬೇಕು. ಇದನ್ನೇ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಸಾಹಿತ್ಯ ಕೃತಿಯಿಂದ ನಾವು ಯಾವ ಅರ್ಥವನ್ನು ಪಡೆದುಕೊಂಡರೂ ಕೂಡಾ. ಅದನ್ನು ಅದರ ಭಾಷೆಯ ಮೂಲಕವೇ ಪಡೆದುಕೊಳ್ಳಬೇಕು ಎನ್ನುತ್ತಾರೆ ಡಾ.ವೆಂಕೋಬರಾವ್ ಎಂ. ಹೊಸಕೋಟೆ. ಈ ಕೃತಿ ಅವರ ವಿಮರ್ಶೆಗಳ ಸಂಕಲನ.
ಲೇಖಕ ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರು ಕನ್ನಡದಲ್ಲಿ ಎಂ.ಎ, ತತ್ವಶಾಸ್ತ್ರದಲ್ಲಿ ಎಂ.ಎ, ಎಂ.ಎಡ್. ಎಂ.ಫಿಲ್ ಶಿಕ್ಷಣ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿಯನ್ನು ಪಡೆದಿದ್ದಾರೆ. ಸದ್ಯ ರಾಜಾಜಿನಗರದ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ- ಮುನಿದೇವರಾವ್ ಸಿ, ತಾಯಿ- ಅನುಸೂಯಬಾಯಿ ಎ. ವೃತ್ತಿಯೊಂದಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ತಲ್ಲಣ, ಒಡಲು, ಮತ್ತೆ ಆಮೇಲೆ ಇನ್ನೇನೂ, ಲಾಕ್ ಡೌನ್ ಋತುಮಾನ, ದಯವಿಟ್ಟು ನಂತರ ಪ್ರಯತ್ನಿಸಿ ಎಂಬ ಕಾದಂಬರಿಗಳು. ಮಿಂಚುಳ್ಳಿ, ಬೆಸುಗೆ, ಕಾಣದ ಕಡಲು, ಆಕಾಶದ ನೀಲಿಯಲ್ಲಿ, ಪ್ರೀತಿ ನೀನಿಲ್ಲದ ಮೇಲೆ ಎಂಬ ಕವನ ಸಂಕಲನಗಳು. ಅಂಚು, ಕಪ್ಪುನೆಲ, ಅಸ್ಮಿತೆಯ ...
READ MORE