ಪ್ರಯೋಗಶೀಲ ಕವಿ ಬೇಂದ್ರೆ

Author : ಬನ್ನಂಜೆ ಗೋವಿಂದಾಚಾರ್ಯ

Pages 76

₹ 40.00




Year of Publication: 2014
Published by: ಅಭಿನವ ಪ್ರಕಾಶನ
Address: 17/18-2 ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ ವಿಜಯನಗರ – 560040

Synopsys

ಶಬ್ದಗಾರುಡಿಗ , ಕವಿ ದ.ರಾ. ಬೇಂದ್ರೆಯವರನ್ನು ಕುರಿತಾದ ’ಪ್ರಯೋಗಶೀಲ ಕವಿ ಬೇಂದ್ರ” ಪುಸ್ತಕವು ಸಾಹಿತಿ, ವಿಮರ್ಶಕರಾದ ಬನ್ನಂಜೆ ಗೋವಿಂದಾಚಾರ್ಯರಿಂದ ಹೊರಬಂದಿದೆ.

ಬೇಂದ್ರೆಯವರ ಕವನ ಸಂಕಲನಗಳಾದ ಒಲವೇ ನಮ್ಮ ಬದುಕು, ನಾಕುತಂತಿ, ಇಳಿದು ಬಾ ತಾಯಿ, ಮುಂತಾದವುಗಳ ಬಗ್ಗೆ ಪ್ರಸ್ತಾಪಿಸುವ ಬನ್ನಂಜೆ ಶಬ್ದಾರ್ಥಗಳನ್ನೂ, ಕಾವ್ಯಧ್ವನಿಯನ್ನೂ ಕುರಿತು ತಿಳಿಸುವ ಮೂಲಕ ಕವಿಯ ಹಲವಾರು ಕವಿತೆಗಳ ಸಾಲುಗಳನ್ನು ತೆರೆಯುತ್ತಾರೆ.

ಬೇಂದ್ರೆ ಅವರ ಕವನಗಳನ್ನು ಅರ್ಥೈಸುವ ಸಂದರ್ಭಗಳಲ್ಲಿ ಶಬ್ದಗಳಿಗೆ ರೂಢಿಯಲ್ಲಿರುವ ಅರ್ಥಗಳನ್ನು ಮಾತ್ರ ಲಕ್ಷಿಸದೆ, ಬೇಂದ್ರೆ ಅಥವಾ ಅಂಬಿಕಾತನಯದತ್ತರ ಕಾವ್ಯ ಭಾಷಾಲೋಕದ ಪ್ರವೇಶವನ್ನು ತೆರೆದಿಡುತ್ತದೆ. ಬೇಂದ್ರೆ ಕವಿಯ ಬಗೆಗಿನ ವಿಮರ್ಶಾತ್ಮಕ ಕೃತಿಯಲ್ಲಿ ಈ ಪುಸ್ತಕ ಅಪರೂಪವಾದದ್ದು.

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books