'ಪ್ರವಾಸಿ ಕಂಡ ಇಂಡಿಯಾ' ನಾಡೋಜ ಎಚ್. ಎಲ್ ನಾಗೇಗೌಡರ ಬೃಹತ್ ಸಾಹಿತ್ಯ ರಚನೆ. ಇದು ಎಂಟು ಸಂಪುಟಗಳ 4112 ಪುಟಗಳ ಮಹಾಪುಸ್ತಕ. ಇಂತಹ ಪುಸ್ತಕವನ್ನು ಶಿವರಾಮಯ್ಯನವು ಅಧ್ಯಯನಮಾಡಿ ಓದುಗರಿಗೆ ಸುಲಭವಾಗುವ ರೀತಿಯಲ್ಲಿ ಸರಳವಾಗಿ ಮರುಸೃಷ್ಠಿಸಿದ್ದಾರೆ.
ಈ ಕೃತಿಯಲ್ಲಿ ದೆದೇಶೀ ಸಮೃದ್ದಿಗೆ ವಿದೇಶಿಗಳನ್ನು ಆಹ್ವಾನಿಸಿ ಸ್ವತಂತ್ರ ಭಾರತವಾಗುವವರೆಗೂ ಅಧೀನ ಗೊಂಡ ಸಂಕಟ ಸಂಕಥನಗಳಿವೆ. ಚತುರ್ವರ್ಣಗಳು ವಿಸ್ತರಿಸಿ ಪಂಚವರ್ಣಗಳಾದ ಅವಮಾನಗಳಿದೆ. ಲಿಂಗ ತಾರತಮ್ಯ ಗಳ ಬೇಸರಗಳು, ಜಗದೇಕ ದಬ್ಬಾಳಿಕೆಗಳಾದ ಈ ಎಲ್ಲವೂ ಬುದ್ಧನಿಂದ ಗಾಂಧಿವರೆಗೆ ಪರಿಷ್ಕಾರಗೊಳ್ಳುತ್ತಲೇ ಬಂದಿರುವುದೇ ಈ ದೇಶದ ಸಾಂಸ್ಕೃತಿಕ ಚರಿತ್ರೆ. ಈ ಎಲ್ಲದರ ಒಳನೋಟಗಳು ಈ ಕೃತಿಯಲ್ಲಿವೆ.
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE