ಪೂರ್ವೋತ್ತರ

Author : ಆನಂದ ಋಗ್ವೇದಿ

Pages 136

₹ 125.00




Year of Publication: 2019
Published by: ಸಾಧನಾ ಪಬ್ಲಿಕೇಷನ್ಸ್
Address: # 15/16, ಶಿವ ಕಾಂಪ್ಲೆಕ್ಸ್, ಡಾ. ರಾಜ್ ಪ್ರತಿಮೆ ಎದುರು, ಬಳೆಪೇಟೆ ಮುಖ್ಯರಸ್ತೆ, ಬೆಂಗಳೂರು-560053

Synopsys

ಡಾ. ಆನಂದ ಋಗ್ವೇದಿ ಅವರ ವಿಮರ್ಶಾತ್ಮಕ ಟಿಪ್ಪಣಿಗಳ ಸಂಗ್ರಹ ಕೃತಿ-ಪೂರ್ವೋತ್ತರ. ಸಾಹಿತಿ ಡಾ. ಧನಂಜಯ ಕುಂಬ್ಳೆ ಕೃತಿಗೆ ಮುನ್ನುಡಿ ಬರೆದು ‘ಮನನ-ಮಥನಗಳಮೂಲಕ ಲೋಕವನ್ನೇ ಅರಿಯುತ್ತಲೇ ಕಂಡುಕೊಂಡಿದ್ದನ್ನು ಮಾತಿನ ಧಾಟಿಯಲ್ಲೇ ಹಂಚುವ ಲೋಕೋಪಕಾರಿಯಾಗುವ ಪಥ-ಸಾಹಿತ್ಯಕ ಚಿಂತನೆಗಳನ್ನು ಅರಳಿಸಿದೆ.

ಮನನ ಮತ್ತು ಮಥನ ಎಂಬ ಎರಡು ಭಾಗಗಳಿವೆ. ಮನನದಲ್ಲಿ ಕವಿ-ಕೃತಿ ಕೇಂದ್ರಿತ ವಿಶ್ಲೇಷಣಾತ್ಮಕ ಬರಹಗಳಿವೆ. ಮಥನ ವಿಭಾಗದಲ್ಲಿ ವರ್ತಮಾನ ಕೇಂದ್ರಿತ ಸಂವೇದನೆಯನ್ನು ಹೊಂದಿದ ಲಹರಿ ಮಾದರಿಯ ತಾತ್ವಿಕ ಚರ್ಚಾ ಬರಹಗಳನ್ನು ಗಮನಿಸಬಹುದು. ಈ ಎರಡೂ ನೆಲೆಗಳ ಬರಹಗಳಲ್ಲೂ ಸಾಹಿತ್ಯ ಪ್ರೀತಿ, ನಿರುದ್ವಿಗ್ನ ವಿಶ್ಲೇಷಣೆ, ವಿಮರ್ಶಕ ದೃಷ್ಟಿ, ಮಾನವೀಯ ಕಾಳಜಿಯ ಕೊರತೆ ಸಾಂದ್ರವಾಗಿ ಒಡಮೂಡಿರುವುದನ್ನು ಕಾಣಬಹುದು. ಬರವಣಿಗೆಯ ಶೈಲಿಯಂತೂ ಆಡಂಬರದ ಅಲಂಕಾರವಿಲ್ಲದ ಸಹಜ ಸುಂದರಿ. ಮಾತಿನ ಆಪ್ತ ಧಾಟಿಯನ್ನು ಬರಹದ ಶೈಲಿಗೆ ಮಿಳಿತಗೊಳಿಸುವ ತನ್ಮೂಲಕ ಪ್ರಶ್ನೆಗಳೊಂದಿಗೆ ಸಂವಾದಕ್ಕೆ ತೆರೆದುಕೊಳ್ಳುವ ಪರಿ ಅನನ್ಯ’ ಎಂದು ಪ್ರಶಂಸಿಸಿದ್ದಾರೆ.

About the Author

ಆನಂದ ಋಗ್ವೇದಿ
(24 May 1974)

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.  ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...

READ MORE

Related Books