'ಪಚ್ಚೆಯ ಜಗುಲಿ’ ಲೇಖಕ, ವಿಮರ್ಶಕ ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಲೇಖನಗಳ ಸಂಕಲನ. ಕೃತಿಗೆ ಹಿರಿಯ ವಿಮರ್ಶಕ ಜಿ.ಎಚ್. ನಾಯಕ ಅವರು ಮುನ್ನುಡಿ ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರನ ಕುರಿತು ಬರೆಯುತ್ತಾ ‘ಪಂಪನ ಶ್ರೇಷ್ಠಾತಿಶ್ರೇಷ್ಠ ಆದಿಪುರಾಣ, ವಿಕ್ರಮಾರ್ಜುನ ವಿಜಯ ಈ ಎರಡು ಮಹಾಕೃತಿಗಳನ್ನು ಕುರಿತು ಬರೆದಿರುವ ಎಳೆಯ ತಲೆಮಾರಿನ ಈ ಸಾಹಿತ್ಯ ವಿಮರ್ಶಕ ಕನ್ನಡ ಸಾಹಿತ್ಯ ವಿಮರ್ಶೆಯ ರಂಗಕ್ಕೆ ಕೊಟ್ಟಂತಹ ಬಹುದೊಡ್ಡ ವಿಮರ್ಶಕಾ ಕೃತಿ ಇದಾಗಿದೆ ಎಂದಿದ್ದಾರೆ'. ಜೊತೆಗೆ ದಿಲೀಪ್ ಕುಮಾರ್ ಅವರು 'ಪಚ್ಚೆಯ ಜಗುಲಿ’ ಕೃತಿಯ ಮೂಲಕ ವಿಮರ್ಶಾಕ್ಷೇತ್ರವನ್ನು ಪ್ರವೇಶ ಮಾಡುತ್ತಿರುವ ಪ್ರತಿಭಾಶಾಲಿ ಎಂದಿದ್ದಾರೆ. ಈ ಎಳೆಯ ವಿಮರ್ಶಕನ ಸ್ವೋಪಜ್ಞ ಹೊಳಹು, ಒಳನೋಟ, ಸದಭಿರುಚಿ, ಸಮನ್ವಿತರಾಗಿರುವ ಸಾಹಿತ್ಯ ವಿಮರ್ಶೆಯನ್ನು ಈ ಕೃತಿ ಒಳಗೊಂಡಿದ್ದು, ಲೇಖಕನಿಗೆ ಪಚ್ಚೆಯ ಜಗಲಿ ಶೀರ್ಷಿಕೆ ಹೊಳೆದದ್ದು ಅಂತಃಪ್ರಜ್ಞೆಯ ಹೊಳಹಿನಂತಿದೆ, ಈ ಶೀರ್ಷಿಕೆ ಸಾರ್ಥಕವಾಗಿದೆ ಎನ್ನುತ್ತಾರೆ. ಅಲ್ಲದೇ ವಿಶೇಷ ಧ್ವನಿಪೂರ್ಣತೆಯಿಂದ ಕೂಡಿ ಸಮರ್ಪಕವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಆರ್. ದಿಲೀಪ್ ಕುಮಾರ್ ಅವರ ಹುಟ್ಟಿದ್ದು1991 ರ ಮಾರ್ಚ್ 16ರಂದು ಮೈಸೂರಿನಲ್ಲಿ. ಮೈಸೂರುನಲ್ಲಿ ಕೆಲವು ಕಾಲ ಇದ್ದು ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿ ಶಿಕ್ಷಣವನ್ನು ಸರಕಾರಿ ಪದವಿ ಕಾಲೇಜು ಚಾಮರಾಜನಗರದಲ್ಲೂ, ಕನ್ನಡ ಸ್ನಾತಕೋತ್ತರದ ಪದವಿಯನ್ನು ಕನ್ನಡ ಸ್ನಾತಕೋತ್ತರ ಕೇಂದ್ರ , ಜೆ ಎಸ್ ಎಸ್ ಕಾಲೇಜು , ಚಾಮರಾಜನಗರದಲ್ಲೂ, ಬಿ ಎಡ್ ಪದವಿಯನ್ನು ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ ಚಾಮರಾಜನಗರದಲ್ಲೂ ಪಡೆದಿದ್ದಾರೆ. ನಾಲಕ್ಕು ವರ್ಷಗಳು ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ...
READ MORE