ಈ ಕೃತಿ 30ಕ್ಕೂ ಅಧಿಕ ಲೇಖನಗಳನ್ನು ಒಳಗೊಂಡಿದೆ. ಮೂಲ ನಿವಾಸಿಗಳು, ಬುಡಕಟ್ಟು ಜನರು, ರಾಷ್ಟ್ರೀಯತೆಯ ಸೋಗು, ಭಾಷಾ ಮಾಧ್ಯಮ, ಬುದ್ಧ, ಬ್ರಾಹ್ಮಣೀಕರಣದ ಭ್ರಮೆಯೊಡ್ಡುವ ಹಳಗನ್ನಡ,ಮಹಾಕಾವ್ಯಗಳ ಬಹುಮುಖಿ ಜಗತ್ತು,ಪುರಾಣದೊಳಗಿನ ಚರಿತ್ರೆಯ ಹೂರಣ, ಅಂಬೇಡ್ಕರ್, ಮಾರ್ಕ್ಸ್ವಾದ, ಹಾಲಿವುಡ್, ಕೆಂಪು ದೀಪ, ಮಲ ಹೊರುವ ಪದ್ಧತಿ ಹೀಗೆ ಪುರಾಣ, ಚರಿತ್ರೆ ಹೀಗೆ ಪ್ರಮುಖ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ವಸಾಹತುಶಾಹಿ ಬೆನ್ನಿಗೆ ಅಂಟಿ ಬಂದ ನಾಗರಿಕತೆಯ ಕುರುಡು ಅಹಂ ಕಾಡುಗಳನ್ನು, ಪ್ರಾಣಿಪಕ್ಷಿಗಳನ್ನು ಮಾತ್ರವಲ್ಲ ಸಾವಿರಾರು ಮಾನವ ಸಂಸ್ಕೃತಿಗಳನ್ನು ಹೊಸಕಿ ಹಾಕಿರುವ ಬರ್ಬರತೆಯನ್ನು ಲೇಖನದಲ್ಲಿ ವಿವರಿಸುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಈ ಸಾಂಸ್ಕೃತಿಕ ಸಾಮರಸ್ಯವನ್ನು ಮರೆಮಾಚುವ ಪ್ರಯತ್ನವನ್ನು ಹೇಗೆ ಮಾಡುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ. ಕಳೆದೆರಡು ಶತಮಾನಗಳಲ್ಲಿ ಸಂಸ್ಕೃತಿ ಕಲ್ಪನೆಯೇ ಅರಿವಳಿಕೆಯಾಗಿ ಕೆಲಸ ಮಾಡಿರುವಾಗ, ರಾಜ್ಯ ಸರಕಾರ ನಿರೂಪಿಸಲು ಹೊರಟಿರುವ ಸಾಂಸ್ಕೃತಿಕ ನೀತಿ ಬಗ್ಗೆ ಅವರು ಆತಂಕ ವ್ಯಕ್ತಪಡಿಸುತ್ತಾರೆ. ಭಾಷಾ ಮಾಧ್ಯಮದ ಕುರಿತಂತೆ ಚರ್ಚಿಸುತ್ತಾ ಶಿಕ್ಷಣದ ಖಾಸಗೀಕರಣ ಹೇಗೆ ಭಾಷೆ ಎನ್ನುವುದು ಬಂಡವಾಳಗಾರ ಕೊಂಡು ಮಾರುವ ಸರಕಾಗಿದೆ ಎನ್ನುವುದನ್ನು ಹೇಳುತ್ತಾರೆ. ವಿಷಯವೊಂದರ ಆಳ ಬಗೆಯುತ್ತಾ ಅಂತಿಮದಲ್ಲದು ಜನಪದರ ಬದುಕಿನತ್ತ ಚಲಿಸಿ ಲಿಖಿತ ಚರಿತ್ರೆಯಿಂದ ದೂರ ಉಳಿದುಕೊಂಡ ಸಂಗತಿಗಳನ್ನೆಲ್ಲ ಈ ಕೃತಿಯಲ್ಲಿ ವಿವರಿಸಿದ್ದಾರೆ.
ಲೇಖಕಿ, ಕವಯಿತ್ರಿ, ಅಂಕಣಕಾರ್ತಿ, ಚಿತ್ರ ನಿರ್ದೇಶಕಿ, ಇತಿಹಾಸ ತಜ್ಞೆ ಹಾಗೂ ಸಂಸ್ಕೃತಿ ಚಿಂತಕಿ ಡಾ.ಎಂ.ವಿ. ವಸು ಆವರು ’ವಸು ಮಳಲಿ’ ಎಂದೇ ಚಿರಪರಿಚಿತರು. ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಅವರ ಪುತ್ರಿ. 1967ರ ಫೆಬ್ರವರಿ 7ರಂದು ಜನಿಸಿದರು. ಖ್ಯಾತ ಫೋಟೋಗ್ರಾಫರ್ ರನ್ನ ಎಂ.ವಿ. ಇವರ ಸಹೋದರ. ವಸು ಮಳಲಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದಿದ್ದ ಅವರು ವಿಶ್ವವಿದ್ಯಾಲಯ ಖೋಖೋ ತಂಡದ ನಾಯಕಿಯೂ ಆಗಿದ್ದರು. ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಅವರು 1998ರಲ್ಲಿ ಬೆಂಗಳೂರು ...
READ MORE