ಅನಂತಮೂರ್ತಿ ಅವರು ವಿವಿಧ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳನ್ನು ಈ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಸಾಹಿತ್ಯ ವಿಮರ್ಶೆಯೆಂದರೆ ಒಂದು ಕೃತಿಯನ್ನು ಆದಷ್ಟು ಪರಿಪೂರ್ಣವೆನ್ನುವಂತೆ ಓದಿಕೊಳ್ಳಬೇಕೆಂಬ ಆಶಯ. ಆದರೆ, ಈ ಆದರ್ಶ ಪ್ರಾಯಶಃ ಎಂದೂ ಸಂಪೂರ್ಣ ಸಿದ್ಧಿಸಲಾಗದ ಆಶಯ. ಈ ಮಿತಿಯ ಅರಿವಿನಿಂದ ವಿಮರ್ಶೆಗೆ ಅಗತ್ಯವಾದ ವಿನಯವೂ, ಸಂವಾದದ ಮುಖೇನ ಪೂರ್ವಗ್ರಹಗಳಿಂದ ಮುಕ್ತವಾಗುವ ಬಯಕೆಯೂ ಹುಟ್ಟಿಕೊಳ್ಳುತ್ತದೆ. ಆದರೆ ತನಗೆ ದಕ್ಕುವಷ್ಟು ಪೂರ್ಣವಾಗಿ ಓದಬೇಕೆಂಬ ಆಶಯದಿಂದ ನೋಟ ಗಾಢವಾಗುತ್ತದೆ; ಸಂವಾದಕ್ಕೆ ಅರ್ಹತೆ ಪಡೆದಂತಾಗುತ್ತದೆ ಎಂಬ ನಂಬಿಕೆಯಿಂದ ಈ ಮುನ್ನುಡಿಗಳು ರಚಿತವಾಗಿವೆ. ಮುನ್ನುಡಿ ಎನ್ನುವುದು ಬರೀ ಪ್ರಾಸ್ತಾವಿಕ ಮಾತುಗಳಷ್ಟೇ ಅಲ್ಲ; ಅದು ಆಯಾ ಸಂದರ್ಭದ ತತ್ಕಾಲೀನತೆಯಲ್ಲಿ ನಡೆಯುವ ಸಾಹಿತ್ಯ ವಿಮರ್ಶೆ; ಸತತವಾದ ಸಾಹಿತ್ಯಾಭ್ಯಾಸದ ಸಂವಾದ ಎಂಬುದು ಈ ಸಂಕಲನದಿಂದ ಸ್ಪಷ್ಟಗೊಳ್ಳುತ್ತದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE