ನಡುಗನ್ನಡ ಸಾಹಿತ್ಯ ಪರಿವೇಷ

Author : ಗುರುಪಾದ ಮರಿಗುದ್ದಿ

Pages 136

₹ 80.00




Year of Publication: 2009
Published by: ಪ್ರತಿಧ್ವನಿ ಪ್ರಕಾಶನ
Address: ನಂ: 100, 2 ನೇ ಮುಖ್ಯರಸ್ತೆ, ಶಿವನಗರ, ರಾಜಾಜಿ ನಗರ, ಬೆಂಗಳೂರು-10

Synopsys

  ಹರಿಹರ, ರಾಘವಾಂಕ, ಚಾಮರಸ, ಕುಮಾರವ್ಯಾಸರೆಲ್ಲ ಒಂದೊಂದು ಹೊಸದಾರಿಯನ್ನು ಕೊರೆದು ತಮ್ಮತನ ಮೆರೆದವರು. ಇವರೊಂದಿಗೆ ನೇಮಿನಾಥ, ಕರ್ಣಪಾರ್ಯ,ರತ್ನಾಕರವರ್ಣಿ, ಹೊನ್ನಮ್ಮ ಎಲ್ಲರೂ ದೇಸಿ ಸಂಸ್ಕೃತಿಯ ಒಂದೊಂದು ಬಗೆಯನ್ನು ಚಿತ್ರಿಸುತ್ತಾರೆ. ಶಿವಗಣದ ರಗಳೆಗಳು, ಮೋಹನ ತರಂಗಿಣಿ ಮತ್ತು ಭರತೇಶವೈಭವದಂತಹ ಕಾವ್ಯಗಳು ನಮ್ಮ ಸಂಸ್ಕೃತಿಯ ಮಹಾಕಾವ್ಯಗಳೇ ಆಗಿವೆ. ಚರಿತ್ರೆ ಕಟ್ಟಿಕೊಡುವ, ವಿಮರ್ಶಾ ಪ್ರಜ್ಞೆಗೆ ಗೌರವ ತೋರುವ ಸಂಗತಿಗಳನ್ನು ಅನೇಕ ಕವಿಗಳಲ್ಲಿ ಗುರುತಿಸುವಂತೆ, ಅವರು ಹಿಂದಿನ ಮತ್ತು ಸಮಕಾಲೀನ ಹಿರಿಯ ಕವಿಗಳನ್ನು ಗೌರವಾದರದಿಂದ ನೆನೆಯುವುದು ಕೂಡ ಗಮನಾರ್ಹವಾಗಿದೆ. ನಡುಗನ್ನಡದಲ್ಲಿ ಕಾಣಿಸುವ ವಸ್ತು, ರೂಪ, ಪ್ರಯೋಗಗಳು ವೈವಿಧ್ಯದಿಂದ ಮತ್ತು ಚಿಂತನೆಯ ಬಹುಕೇಂದ್ರಗಳಿಂದ ಅಚ್ಚರಿ ಉಂಟು ಮಾಡುತ್ತವೆ. ಪ್ರಸ್ತುತ ವಿಮರ್ಶಾ ಲೇಖನಗಳ ಸಂಗ್ರಹವು ನನ್ನ ದೀರ್ಪಕಾಲದ ಓದು, ಅಧ್ಯಯನ,ಚರ್ಚೆ, ಚಿಂತನೆಗಳ ಫಲಶೃುತಿಯಾಗಿದೆ. ಮೊದಲ ಅಪ್ರಕಟಿತ ಲೇಖನವೊಂದನ್ನು ಹೊರತು ಪಡಿಸಿದರೆ ಇತರ ಏಳು ಲೇಖನಗಳು ಬೇರೆ ಬೇರೆ ಕೃತಿಗಳಿಗಾಗಿ ಬರೆದವುಗಳು.ಮೊದಲ ಲೇಖನ ಪ್ರಸ್ತುತ ಸಂಕಲನಕ್ಕೆಂದೇ ರೂಪಿತವಾಗಿದ್ದು, ಇತರ ಲೇಖನಗಳಿಗೆ ಪೂರಕವಾಗಿದೆ. ನಾನು ವಚನಕಾರರು, ಹರಿಹರ, ತತ್ಹಪದಕಾರರನ್ನು ಅಧ್ಯಯನಕ್ಕೆ ಒಳಪಡಿಸಿ ಕಂಡುಕೊಂಡ ಅಂಶಗಳನ್ನು ಇಲ್ಲಿ ಎತ್ತಿತೋರಲು ಪ್ರಯತ್ನಿಸಿದ್ದೇನೆ. ಆಯಾಕಾಲದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತು ಆಧುನಿಕ ಕಾಲದ ವಿಚಾರಗಳ ಗ್ರಹಿಕೆಯಲ್ಲಿಕೆಲವು ಕವಿ-ಕೃತಿಗಳನ್ನು ಅರ್ಥೈಸಲು ನಡೆಸಿರುವ ನನ್ನ ಈ ಯತ್ನಕ್ಕೆ ಅನೇಕ ಮಿತಿಗಳಿರುವುದು ಕೂಡ ನನಗೆ ಗೊತ್ತು.

 ಪ್ರಸ್ತುತ ಕೃತಿಯು ನಡುಗನ್ನಡ ಕಾಲದ ಸಾಹಿತ್ಯಿಕ, ಸಾಂಸ್ಕೃತಿಕ, ವಿದ್ಯಮಾನಗಳ ವಿಶಿಷ್ಟ ಚರ್ಚೆಯಾಗಿದೆ. ಕವಿ ಕೃತಿಗಳನ್ನು ಕಾಲದ, ಪರಿಸರದ ಒಳಗಿಟ್ಟು ನೋಡುತ್ತ ಆ ಮೂಲಕ ವರ್ತಮಾನವನ್ನು ಎದುರುಗೊಳ್ಳುವ ಹಂಬಲ ಇಲ್ಲಿದೆ. ಪರಂಪರೆಯ ಸತ್ವ ಹುಡುಕುವ , ನಮ್ಮ ಬದುಕಿನ ಸಂಧರ್ಭ ಗುರುತಿಸುವ ಆಶಯವೂ ಅದರೊಂದಿಗೆ ಸೇರಿಕೊಂಡಿದೆ. ವಚನಕಾರರು, ರಗಳೆಗಳು, ಷಟ್ಪದಿ, ಸಾಂಗತ್ಯದ ಕವಿಗಳು, ತತ್ವಪದಕಾರರು, ನೀಡಿರುವ ಕಾಣ್ಕೆಗಳ ಶೋಧವಿಲ್ಲಿ ಸರಳವಾಗಿ, ನೇರವಾಗಿ ಬಂದಿದೆ. ಇದು ಇಂದಿನ ದಿನಗಳಲ್ಲಿ ಸ್ವಾಗತಾರ್ಹ ಪ್ರಯೋಗವಾಗಿದೆ. ಸಾಹಿತ್ಯ ಅಧ್ಯಯನದ ಸಾಧ್ಯತೆಯನ್ನು  ವಿಸ್ತರಿಸುವ ಮುಖ್ಯ ಪ್ರಯತ್ನವಾಗಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books