ಕನ್ನಡ ನವ್ಯಕಾವ್ಯದ ಪ್ರವರ್ತಕ ಎಂದೇ ಗುರುತಿಸಿಕೊಂಡ ಎಂ. ಗೋಪಾಲಕೃಷ್ಣ ಅಡಿಗರ ಕಾವ್ಯ ಉಳಿದ ನವ್ಯಕಾವ್ಯಕ್ಕಿಂತಲೂ ಅನನ್ಯವಾದುದು. ಮೋಹನ ಮುರಳಿಯಿಂದ ಧೂಮಲೀಲೆಯವರೆಗೆ, ಹುತ್ತದಿಂದ ಚಿತ್ತದವರೆಗೆ ಅವರು ಕಾವ್ಯ ಕಟೆಯುತ್ತಿದ್ದ ಬಗೆ ವಿಭಿನ್ನ. ಇಂಥ ಕನ್ನಡದ ಮಹತ್ವದ ಕವಿಯ ಸಂವೇದನಾಶೀಲತೆಯನ್ನು ಅರ್ಥ ಮಾಡಿಸಲು ತೊಡಗುತ್ತದೆ 'ಮರುಕಳಿಸಿದ ಮಾರ್ದವತೆ'.
ಅಡಿಗರ ಪ್ರಕಾರ ''ಕಾವ್ಯ ಮುಖ್ಯವಾಗಿ ಎಲ್ಲ ಕಾಲಗಳಲ್ಲೂ, ಎಲ್ಲ ದೇಶಗಳಲ್ಲೂ, ಹೆಚ್ಚು ಕಡಿಮೆ ಒಂದೇ ರೀತಿಯ ಇಂದ್ರಿಯಗಳು, ಮನಸ್ಸು, ವಿವೇಚನೆ, ಕನಸು ಇವುಗಳಿಂದ ಕೂಡಿದ ಒಂದೇ ಆದ ಮಾನವನ ಆಂತರಂಗಕ್ಕೆ ಸಂಬಂಧಪಟ್ಟಿದ್ದು. ಮೂಲದಲ್ಲಿರುವ ಭಾವನೆಗಳು, ಆಕಾಂಕ್ಷೆಗಳು, ಸುಖ, ದುಃಖಗಳು, ಜನನ ಮರಣಗಳು, ಬಡತನ ಶ್ರೀಮಂತಿಕೆಗಳು, ಆರೋಗ್ಯ, ಅನಾರೋಗ್ಯ, ಉನ್ಮಾದ. ಈ ಎಲ್ಲವೂ ಎಲ್ಲ ಕಾಲಗಳಲ್ಲಿ ಒಂದೇ.'
ಪುಸ್ತಕವನ್ನು ಹೊರತಂದಿರುವ ಸಾಹಿತಿ ಕೆ. ಸತ್ಯನಾರಾಯಣ ಅವರು, ''ಅಡಿಗರ ಹೆಗ್ಗಳಿಕೆಯೆಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ವಿಶಿಷ್ಟ ಘಟ್ಟದಲ್ಲಿ ಹೊಸ ಕಾವ್ಯ ಮಾರ್ಗವೊಂದರ ಪ್ರವರ್ತಕರಾಗಿದ್ದೂ ಆ ಮಾರ್ಗದ ವಿಶಿಷ್ಟತೆ ಸಾಧ್ಯತೆಗಳನ್ನೂ ಮೀರಿ ಸಾಹಿತ್ಯ ಮತ್ತು ಮನುಷ್ಯನ ಇತಿಹಾಸದಲ್ಲಿ ಕಾವ್ಯ ಧರ್ಮದ ಪಾತ್ರವೇನು, ಸ್ಥಾನವೇನು ಎಂಬುದರ ಬಗ್ಗೆ ಅವರು ಸದಾ ಎಚ್ಚರದಿಂದ ಇದ್ದದ್ದು' ಎಂದಿದ್ದಾರೆ.
ಅಡಿಗರ ಕಾವ್ಯದ ಕುರಿತು ಲೇಖಕ ಕೆ.ಸತ್ಯನಾರಾಯಣ ಅವರು ಇಪ್ಪತ್ತೈದು ವರ್ಷಗಳ ಕಾಲಾವಧಿಯಲ್ಲಿ ಬರೆದ ಬರಹಗಳ ಸಂಕಲನ ಈ ಕೃತಿ. ಅಡಿಗರ ಒಡನಾಟದಲ್ಲಿ ಲೇಖಕ ತಾನು ಕಂಡ, ಅರಿತ ಕಾವ್ಯಾನುಭವದ ಕುರಿತು, ಅವರ ಕಾವ್ಯದಿಂದ, ಬದುಕಿನಿಂದ ಪ್ರಭಾವಿತರಾಗಿದ್ದ ಸತ್ಯನಾರಾಯಣ ಅವರ ದೃಷ್ಟಿಯಲ್ಲಿ ಅಡಿಗರು ಈ ಕೃತಿಯ ಜೀವಾಳ. ನನ್ನ ಬರವಣಿಗೆ-ಚಿಂತನೆಯ ಕ್ರಮ ನವ್ಯ ಸಾಹಿತ್ಯ ಕಾವ್ಯದ ಆಶಯಗಳಿಗಿಂತ ತೀರಾ ಭಿನ್ನವಾದದ್ದು, ಕೆಲವು ಸ್ತರಗಳಲ್ಲಿ ಅದನ್ನು ವಿರೋಧಿಸುವಂತದ್ದು ಎನ್ನುತ್ತಾರೆ ಲೇಖಕ ಕೆ.ಸತ್ಯನಾರಾಯಣ. ಅಡಿಗರ ಹೆಗ್ಗಳಿಕೆಯೆಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ವಿಶಿಷ್ಟ ಘಟ್ಟದಲ್ಲಿ ಹೊಸ ಕಾವ್ಯ ಮಾರ್ಗವೊಂದರ ಪ್ರವರ್ತಕರಾಗಿದ್ದೂ ಆ ಮಾರ್ಗದ ವಿಶಿಷ್ಟತೆ ಸಾಧ್ಯತೆಗಳನ್ನೂ ಮೀರಿ ಸಾಹಿತ್ಯ ಮತ್ತು ಮನುಷ್ಯನ ಇತಿಹಾಸದಲ್ಲಿ ಕಾವ್ಯ ಧರ್ಮದ ಪಾತ್ರವೇನು, ಸ್ಥಾನವೇನು ಎಂಬುದರ ಬಗ್ಗೆ ಅಡಿಗರು ಸದಾ ಎಚ್ಚರದಿಂದ ಇದ್ದದ್ದು. ಈ ಪುಸ್ತಕದಲ್ಲಿ ಎಂ.ಗೋಪಾಲಕೃಷ್ಣ ಅಡಿಗರ ಕೆಲವು ಸಂವೇದನೆಗಳು, ಬದುಕು, ಬರಹಗಳ ಕುರಿತು ಬರೆಯಲಾಗಿದೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE