ಮಧ್ಯಮ ಪಥ-ವಿಮರ್ಶಾತ್ಮಕ ವೈಚಾರಿಕ ಕೃತಿ. ವರ್ತಮಾನವನ್ನು ಐತಿಹಾಸಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ ಬರಹಗಳು ಇಲ್ಲಿವೆ. ಕೃತಿಗೆ ಮುನ್ನುಡಿ ಬರೆದಿರುವ ಡಾ.ಜಿ.ರಾಮಕೃಷ್ಣ ಅವರು,'ಬೌದ್ಧಿಕ ಪ್ರಕ್ರಿಯೆಯು ಕೇವಲ ಕಸರತ್ತಾಗಿ ಉಳಿಯಬೇಕೆ ಅಥವಾ ಅದಕ್ಕೆ ಕ್ರಿಯಾತ್ಮಕ ಪರಿಣಾಮವೊಂದು ಇರುತ್ತದೆಯೇ?"ಎಂಬ ಪ್ರಶ್ನೆಯನ್ನು ಕೃತಿಯ ಮೂಲಕ ಮುಂದಿಟ್ಟಿದ್ದಾರೆ. ಬೆನ್ನುಡಿ ಬರೆದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು,"ಹೊಸ ಬಗೆಯ ಚಿಂತನೆ,ಲೇಖನ,ಅಭಿವ್ಯಕ್ತಿ ಮಾರ್ಗಗಳ ಹುಡುಕಾಟಕ್ಕಾಗಿ ಯಾವಾಗಲೂ ತಲ್ಲಣಿಸುವ,ಯತ್ನಿಸುವ ಕನ್ನಡದ ಇತ್ತೀಚಿನ ಯುವ ಮನಸುಗಳಲ್ಲಿ ಅರವಿಂದ ಚೊಕ್ಕಾಡಿ ಅವರದು ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು.ಅವಿರತ ಪರಿಶ್ರಮ,ವಿಸ್ತೃತ ಓದು,ಪ್ರಚಂಡ ಸಂಕಲ್ಪ ಶಕ್ತಿ ಮತ್ತು ಕೆಲವು ಖಚಿತ ನಿಲುವುಗಳ ಮಧ್ಯೆ ಸುಳಿದಾಡುವುದರ ಮೂಲಕ ತಮ್ಮನ್ನು ಇನ್ನಷ್ಟು ಮತ್ತಷ್ಟು ತಿದ್ದಿಕೊಳ್ಳಬೇಕೆಂಬ ಹಂಬಲವನ್ನು ಪೋಷಿಸಿಕೊಳ್ಳುತ್ತಾ ಬೆಳೆಯುತ್ತಿರುವ ಅರವಿಂದರಿಗೆ ಬೆಂಬಲವಾಗಿರುವುದು ಅವರ ವಿನಯ ಮತ್ತು ನಿಂತ ನೀರಾಗಿರಬಾರದು ಎಂಬ ನಿರ್ಧಾರ"ಎಂಬುದನ್ನು ಕೃತಿಯಲ್ಲಿ ಗುರುತಿಸಿದ್ದಾರೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MOREಹೊಸತು-2004- ಎಪ್ರಿಲ್
ತಮ್ಮ ನಿರ್ಭೀತ ಅನಿಸಿಕೆಗಳನ್ನು ವಿಚಾರಮಂಥನ ನಡೆಸಲು ಯೋಗ್ಯವಾದ ರೀತಿಯಲ್ಲಿ ಬರಹಗಳ ಮೂಲಕ ಪ್ರಚುರ ಪಡಿಸು ತ್ತಿರುವ ಶ್ರೀ ಅರವಿಂದ ಚೊಕ್ಕಾಡಿ ನಮಗೆಲ್ಲ ಈಗಾಗಲೇ ಪರಿಚಿತರು. ಉದಯೋನ್ಮುಖ ಲೇಖಕರೆಂದು ಗುರುತಿಸಿ ನೋಡನೋಡುತ್ತಿದ್ದಂತೆಯೇ ಪ್ರೌಢ ವಿಚಾರಗಳು ಬರವಣಿಗೆ ಯಷ್ಟೇ ಅಲ್ಲ ಬೆಳವಣಿಗೆಯನ್ನೂ ಹೊಂದಿ ದಾಪುಗಾಲಿಡುತ್ತ ಅಚ್ಚರಿಯೆನಿಸುವಷ್ಟು ದೂರ ಕ್ರಮಿಸಿದ್ದಾರೆ. ನಮ್ಮ ಪ್ರಾಚೀನ ಗ್ರಂಥಗಳ ಗೊಂದಲಮಯ ಚಾರಿತ್ರಿಕ ಬರಹಗಳ ಕಡೆಗೆ ನಮ್ಮ ಗಮನ ಸೆಳೆದು ಅಲ್ಲಿನ ಸರಕಿನ ಗುಣಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.