ಯು. ಆರ್. ಅನಂತಮೂರ್ತಿ ಅವರು ತಮ್ಮ ಮೊದಲ ಕಾದಂಬರಿ 'ಸಂಸ್ಕಾರ' ಪ್ರಕಟಗೊಂಡ ಸಂದರ್ಭದಲ್ಲಿ ಎತ್ತಿದ ಪ್ರಶ್ನೆಗಳಿಗೆ ಆ ದಿನಗಳಲ್ಲಿ ತಮ್ಮ ದಿನಚರಿಯಲ್ಲಿ ಮಾಡಿಕೊಂಡ ಟಿಪ್ಪಣಿಗಳು, ನರಸಿಂಹಸ್ವಾಮಿ ಅವರ `ಶಿಲಾಲತೆ' ಪ್ರಕಟಗೊಂಡಾಗ ಆ ಕೃತಿಯ ಬಗೆಗೆ ಬರೆದಿದ್ದ ಅಪ್ರಕಟಿತ ಲೇಖನ ಮತ್ತು ಅಕ್ಷರ ಹೊಸ ಕಾವ್ಯ'ದ ಲಂಕೇಶರ ಮುನ್ನುಡಿಗೆ ಪ್ರತಿಕ್ರಿಯೆಯಾಗಿ `ಹಿಪ್ಪಿಯೋ ಡ್ಯಾಂಡಿಯೋ' ಲೇಖನ, ಕನ್ನಡದಲ್ಲಿ ಹೊಸ ಬಗೆಯ ವಾಗ್ವಾದಕ್ಕೆ ಕಾರಣವಾದ ಬ್ರಾಹ್ಮಣ-ಶೂದ್ರ ಪ್ರಜ್ಞೆ ಲೇಖನಕ್ಕೆ ಬಂದ ಭಿನ್ನಾಭಿಪ್ರಾಯಗಳಿಗೆ ವ್ಯಕ್ತಪಡಿಸಿದ ಅಪ್ರಕಟಿತ ಟಿಪ್ಪಣಿ ಇತ್ಯಾದಿ ಲೇಖನಗಳು ಈ ಸಂಕಲನದಲ್ಲಿವೆ.
ಪೂರ್ಣಚಂದ್ರ ತೇಜಸ್ವಿ, ಸುಬ್ರಾಯ ಚೊಕ್ಕಾಡಿ, ಬಿ.ಎಂ.ಶ್ರೀ. ರಾಮಚಂದ್ರ ಗಾಂಧಿ, ಭೈರಪ್ಪ, ಬಿ. ವಿ. ಕಾರಂತ, ಮುರಾರಿ ಬಲ್ಲಾಳ, ನಾಗತಿಹಳ್ಳಿ ಚಂದ್ರಶೇಖರ, ಅಕ್ಷರ, ಸುರೇಂದ್ರನಾಥ್ ಮುಂತಾದವರ ಕೃತಿ, ಒಡನಾಡಿದ ಕ್ಷಣಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಇವೆಲ್ಲದರ ಜೊತೆಗೆ ಐವತ್ತು ವರ್ಷಗಳಲ್ಲಿ ಸಾಂಸ್ಕೃತಿಕವಾಗಿ ಎದ್ದ ವಾಗ್ವಾದಗಳಿಗೆ ತಮ್ಮ ಸುದೀರ್ಘ ಮುನ್ನುಡಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಇದು ಅವರ ಅಪರೂಪದ ಮತ್ತು ಐವತ್ತು ವರ್ಷಗಳ ಸಾಂಸ್ಕೃತಿಕ ವಿದ್ಯಮಾನಗಳ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಪುಸ್ತಕ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE