ಮಾತು- ಮೌನಗಳ ರಾಗರತಿ

Author : ಗುರುಪಾದ ಮರಿಗುದ್ದಿ

Pages 140

₹ 115.00




Year of Publication: 2018
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯ ರಸ್ತೆ , ಕಲಬುರಗಿ-585101
Phone: 9731828999

Synopsys

ಗುರುಪಾದಪ್ಪ ಮರಿಗುದ್ದಿಯವರ “ಮಾತು ಮೌನಗಳ ರಾಗರತಿ' ಒಂದು ಅತ್ಯುತ್ತಮ ವಿಮರ್ಶಾ ಕೃತಿಯಾಗಿದೆ. ಇದರಲ್ಲಿ ಮೌಲಿಕವಾದ ಹತ್ತು ಲೇಖನಗಳಿವೆ. ಸ್ವತಃ ಅವರೇ ಕೃತಿಯ ಆಳ ಅಂತರವನ್ನು ಅದರ ಮಹತ್ವವನ್ನು ಕುರಿತು ಮುನ್ನುಡಿ ರೂಪದ ಪ್ರಾಸ್ತಾವಿಕ ಮಾತುಗಳಲ್ಲಿ 'ಮತ್ತೆ ಮತ್ತೆ ಮೀಟುತಿದೆ' ಎಂಬ ತಲೆ ಬರಹದ ಅಡಿಯಲ್ಲಿ ಮೌಲಿಕವಾದ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಮೌನ ತನ್ನ ತಾನೇ ನಿರುಮ್ಮಳವಾಗಿರಬೇಕೆಂದು ಬಯಸಿದರೆ ಅದಕ್ಕೆ ಮಾತು ಆಸ್ಪದ ಕೊಡುವುದಿಲ್ಲ. ಅದು ಮತ್ತೆ ಮತ್ತೆ ಮಾತನಾಡಿಸಲು ಹಚ್ಚುತ್ತದೆ. ಮಾತು ಮನಂಗಳಿಗೆ ಮೀರಿದ ನಾದ ಲೋಕವಿರುತ್ತದೆ. ಅಲ್ಲಿ ಶಬ್ದ ಉತ್ಪತ್ತಿಯಾಗುತ್ತದೆ ಎಂಬ ಆಧ್ಯಾತ್ಮಿಕ ಸತ್ಯವನ್ನು ಹೇಳಿದ್ದಾರೆ. ಲೇಖಕರು ಆಧ್ಯಾತ್ಮವಾದಿಗಳಾಗಿರುವುದರಿಂದ ಆಧ್ಯಾತ್ಮದ ತಳಹದಿ ಮೇಲೆ ಅನೇಕ ವಿಚಾರಗಳನ್ನು ಕಟ್ಟಲು ಹೊರಟಿದ್ದಾರೆ. ಆ ಹಿನ್ನೆಲೆಯಲ್ಲಿ ಇಲ್ಲಿಯ ಲೇಖನಗಳು ಹೊರಹೊಮ್ಮಿವೆ. ಮಾತಿನ ಸೂತಕದಲ್ಲಿ ಬಿದ್ದು ನರಳಬೇಡ ಎಲೆ ಮರುಳೆ ಎಂದು ಅಲ್ಲಮಪ್ರಭು ಹೇಳುವ ಮಾತುಗಳು ನೋಡಿದಾಗ ಇಂದಿನ ಜನ ಮಾತಿನ, ಶಬ್ದಗಳ ಸೂತಕಗಳಲ್ಲಿ ಸಿಕ್ಕು ಒಡ್ಡಾತುತ್ತಿದ್ದಾರೆ ಎಂಬುದನ್ನು ನಾವು ಕಾಣುತ್ತೇವೆ. ಅದರಲ್ಲಿ ವಿಮರ್ಶೆ ಕೂಡಾ ಒಂದಾಗಿದೆಯೆಂದು ಹೇಳುವ ಮರಿಗುದ್ದಿಯವರು ಅತ್ಯುತಮವಾದ ವಿಮರ್ಶಾ ಲೇಖನಗಳನ್ನು ರಚಿಸಿದ್ದಾರೆ. ಇವು ಆಯಾ ಕಾಲ ಸಂದರ್ಭದಲ್ಲಿ ಬಿಡಿ ಬಿಡಿ ಮಾಡಿದ್ದರೂ, ಅವು ರಚನೆಗೊಂಡಿದ್ದು ಬೇರೆಯಾಗಿದ್ದರೂ, ಇಡಿಯಾಗಿ ಪುಸ್ತಕ ರೂಪದಲ್ಲಿ ಅಂದ ಚಂದವಾಗಿ ಮೂಡಿ ಬಂದಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books