‘ಲಂಕೇಶರ ಕಥನ ಸಾಹಿತ್ಯದಲ್ಲಿ ಗ್ರಾಮಸಮಾಜ’ ಲೇಖಕ ಸಿ. ವೆಂಕಟೇಶ್ ಅವರು ಬರೆದಿರುವ ವಿಮರ್ಶಾ ಲೇಖನಗಳ ಸಂಕಲನ. ಇಲ್ಲಿ ಪಿ. ಲಂಕೇಶ್ ಅವರ ಕಥನ ಸಾಹಿತ್ಯದಲ್ಲಿ ಗ್ರಾಮಸಮಾಜದ ಕುರಿತಾದ ವಿಮರ್ಶೆಗಳಿವೆ. ನವ್ಯ ಸಂದರ್ಭದ ಗ್ರಾಮಸಮಾಜ ಕೆಲವು ಪ್ರಾತಿನಿಧಿಕ ಕೃತಿಗಳ ಚರ್ಚೆ, ಲಂಕೇಶರ ನವ್ಯ ಘಟ್ಟದ ಕಥನಸಾಹಿತ್ಯದಲ್ಲಿ ಗ್ರಾಮಸಮಾಜ ಮೊದಲ ಘಟ್ಟದ ಗ್ರಹಿಕೆಯ ನೆಲೆಗಳು, ಸೂಕ್ಷ್ಮ ಮತ್ತು ವಿಕ್ಷಿಪ್ತ ಸಂವೇದನೆಯ ಪ್ರಮುಖ ಪಾತ್ರಗಳು- ಹಿನ್ನೆಲೆಯೊಂದಿಗೆ, ಸಮಗ್ರ ಗ್ರಾಮಭಾರತದ ಕತೆಯಾಗಿ- ಮುಸ್ಸಂಜೆಯ ಕಥಾಪ್ರಸಂಗ, ವಾಸ್ತವತೆ ಮತ್ತು ಜೀವನ ಪ್ರೀತಿಯ ಹೊಸದಾರಿ- ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
.ಸಿ. ವೆಂಕಟೇಶ ಅವರು ಎಂ.ಎ. ಹಾಗೂ ಎಂ.ಫಿಲ್ ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರು. ದ್ರಾವಿಡ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ತೌಲನಿಕ ಅಧ್ಯಯನ ಮತ್ತು ಅನುವಾದ ಕ್ಷೇತ್ರದಲ್ಲಿ ಆಸಕ್ತರು. ಕೃತಿಗಳು: ಲಂಕೇಶರ ಕಥನ ಸಾಹಿತ್ಯದಲ್ಲಿ ಗ್ರಾಮಸಮಾಜ, ತೆಲುಗು ದಾಕ್ಷಿಣಾತ್ಯ ಸಾಹಿತ್ಯ , ದ್ರಾವಿಡ ನಿಘಂಟು (ಇತರರೊಂದಿಗೆ). ಮತ್ತು ವೇಮನ ಮತ್ತು ಇತರ ಅನುಭಾವಿಗಳು, ದ್ರಾವಿಡ ಅಧ್ಯಯನ, ಆಂಧ್ರದ ವಿಶಿಷ್ಟ ಕಲಾಪ್ರಕಾರ: ಕೂಚಿಪೂಡಿ, ದ್ರಾವಿಡ ಅಧ್ಯಯನ, ಸಂಪುಟ, ಆಂಧ್ರರ ಪ್ರಾಚೀನತೆ, ದ್ರಾವಿಡ ಅಧ್ಯಯನ ಹೀಗೆ ವಿವಿಧ ವಿಷಯಗಳಡಿ ಲೇಖನಗಳನ್ನು ಬರೆದಿದ್ದಾರೆ. ...
READ MORE