ಕುವೆಂಪು ಅವರ ವಿಸ್ತಾರವಾದ ಮತ್ತು ಶ್ರೀಮಂತವಾದ ಸಾಹಿತ್ಯಕ್ಕೆ ಒಂದು ಪ್ರವೇಶ, ಅವರ ಮಹಾಕಾವ್ಯ, ಕಾದಂಬರಿಗಳು, ನಾಟಕ, ಸಣ್ಣಕಥೆಗಳು ಮತ್ತು ಗದ್ಯ ಸಾಹಿತ್ಯಕ್ಕೆ ಇಲ್ಲಿ ಕನ್ನಡಿ ಹಿಡಿದಿದೆ. ಪಾಶ್ಚಾತ್ಯ ಸಾಹಿತ್ಯದೊಂದಿಗೆ ಅವರ ಸಂಬಂಧವನ್ನು ಗಮನಿಸಿ ಅವರ ಸ್ಪರ್ಶಮಣಿ ಪ್ರತಿಭೆಯ ಸ್ವರೂಪವನ್ನು ವಿವೇಚಿಸಿದೆ. "ಶ್ರೀ ರಾಮಾಯಣ ದರ್ಶನಂ" ನಲ್ಲಿ ಶ್ರೀ ಸಾಮಾನ್ಯ, ಮಹೋಪಮೆಯ ಬಳಕೆ ಮೊದಲಾದ ವಿಷಯಗಳನ್ನು ಅಧ್ಯಯನ ಮಾಡಿ ಅವರ ಒಟ್ಟಾರೆ ಪ್ರತಿಭೆಯನ್ನು, ಸಾಧನೆಯನ್ನು ವಿವರಿಸಿದೆ. ಕುವೆಂಪು ಅವರ ಸಾಹಿತ್ಯದ ಅಧ್ಯಯನಕ್ಕೆ ಅನಿವಾರ್ಯವಾದ ಕೃತಿ.
ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...
READ MORE