ಕವಿ ಕುವೆಂಪು ಜೀವಪರ-ಜನಪರ ನಿಲುವಿನ ಲೇಖಕ. ಅವರ ಕಾವ್ಯ-ಗದ್ಯ ಬರವಣಿಗೆಗಳೆರಡರಲ್ಲಿಯೂ ಅದು ದಾಖಲಾಗಿದೆ. ಆಧುನಿಕ ಸ್ತ್ರೀವಾದಿ ನೆಲೆಯಲ್ಲಿ ಕುವೆಂಪು ಬರವಣಿಗೆ ಅವಲೋಕಿಸಿದಾಗಲೂ ಈ ಮಾತು ದಿಟ. ಕುವೆಂಪು ಅವರ ಸ್ತ್ರೀ ಪಾತ್ರಗಳನ್ನು ಕುರಿತು ಜೆ.ಎಸ್. ಉಷಾದೇವಿ ಅವರು ಈ ಪುಸ್ತಕದಲ್ಲಿ ವಿವರವಾಗಿ ಚರ್ಚಿಸಿದ್ದಾರೆ.
ಕುವೆಂಪು ಅವರ ಸ್ತ್ರೀಪರ ನಿಲುವು-ಧೋರಣೆಗಳು ವ್ಯಕ್ತವಾಗಿರುವ ಕ್ರಮವನ್ನು ಲೇಖಕಿ ವಿಶ್ಲೇಷಿಸಿದ್ದಾರೆ. ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಹಾಗೂ ಮಹಾಕಾವ್ಯದಲ್ಲಿನ ಮಂಥರೆ, ಊರ್ಮಿಳೆಯ ಪಾತ್ರಗಳ ಚಿತ್ರಣದ ಮಹತ್ವವನ್ನು ವಿವರಿಸಿದ್ದಾರೆ.
ಡಾ. ಜೆ.ಎಸ್. ಉಷಾದೇವಿ ಅವರು ಸಹಾಯಕ ಪ್ರಾಧ್ಯಾಪಕರು. ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ...
READ MORE