ಕಾವ್ಯವು ಉದ್ಯೋಗವಲ್ಲ-ಉದ್‌+ಯೋಗ

Author : ಬಿ.ಬಿ. ರಾಜಪುರೋಹಿತ

Pages 160

₹ 100.00

Buy Now


Year of Publication: 2016
Published by: ಶ್ರೀಮಾತಾ ಪ್ರಕಾಶನ
Address: ಅಂಬಿಕಾತನಯದತ್ತ ವೇದಿಕೆ, ವಿಶ್ವಶ್ರಮ ಚೇತನ, ಗೋಕುಲ ರಸ್ತೆ, ಹುಬ್ಬಳ್ಳಿ-580030

Synopsys

ರಾಜಪುರೋಹಿತರು ಬೇಂದ್ರೆಯವರನ್ನು ಪುಸ್ತಕದಲ್ಲಿಈ ಅಧ್ಯಾಯಗಳಲ್ಲಿ ಚರ್ಚೆ ನಡೆಸಿದ್ದಾರೆ-

ಬೇಂದ್ರೆಯವರ ಸಾಹಿತ್ಯದ ವಿಸ್ತಾರ, ಬೇಂದ್ರೆಯವರ ಸಾಹಿತ್ಯದ ಪ್ರಭೆ,ಕೃತಿಗಳ ಮುನ್ನುಡಿಗಳು, 'ನಾದಲೀಲೆ'ಗೆ ಮಾಸ್ತಿ ಅವರ ಮುನ್ನುಡಿ, ಹೊಸ ಕಾವ್ಯ ಪ್ರಕಾರದಲ್ಲಿ ಬೇಂದ್ರೆಯವರ ಯಶಸ್ಸು, ಬೇಂದ್ರೆಯವರ ನಾಟಕ ಪ್ರವೃತ್ತಿ, ಕೆ.ಆರ್. ಮಹಿಷಿ ಅವರ ಮುನ್ನುಡಿ, ಕವಿವರರ ಮಹತ್ವದ ಕೃತಿಗಳು, ಜಿ. ಕೃಷ್ಣಮೂರ್ತಿ ಮತ್ತು ಗುಳವಣಿ ಮಹಾರಾಜರ ದರ್ಶನ, ಗಂಗಾವತರಣ, ವರಕವಿಯ ಕವಿತಾ ರಚನಾ ಘಟ್ಟಗಳು, 'ಅರಳು ಮರಳು'ವಿನಿಂದ ಎರಡನೆಯ ಘಟ್ಟ, “ಅರಳು ಮರಳು'ವಿನ ನಂತರದ ಸಂಕಲನಗಳು, ಕವಿವರ್ಯರ ಮರಣೋತ್ತರ ಕವನ ಸಂಗ್ರಹಗಳು, ಆಯ್ದ ಕವನಗಳ ಸಂಕಲನಗಳು, “ನೂರು ಮರ, ನೂರು ಸ್ವರ; ಒಂದೊಂದು ಅತಿಮಧುರ', ಮಹಾಕಾವ್ಯದ ವ್ಯಾಖ್ಯೆ ಮತ್ತು ಚರ್ಚೆ, ಇತರ ಭಾಷೆಗಳಲ್ಲಿ ಬೇಂದ್ರೆಯವರ ಕವಿತಾ ರಚನೆ, ಬೇಂದ್ರೆಯವರ ಕಾವ್ಯದ ಭಾಷಾಂತರಗಳು,  ಬೇರೆಯವರು ಮಾಡಿದ ಬೇಂದ್ರೆ ಪದ್ಯಗಳ ಭಾಷಾಂತರಗಳು, ಬೇಂದ್ರೆಯವರ ಕವಿತೆಗಳಿಗೆ ಸಂಗೀತ ಸಂಯೋಜನೆ, ಬೇಂದ್ರೆಯವರ ನಾಟಕಗಳು, ಕತೆ, ಹರಟೆ, ನಗೆಹಾಡುಗಳು, ಭಾಷಣಗಳು ಮತ್ತು ವಿಚಾರಗಳು, ಸಂಪಾದಿತ ಕೃತಿಗಳು, ಅನುವಾದಿತ ಕೃತಿಗಳು, ಮರಾಠಿಯಲ್ಲಿ ಕೃತಿಗಳು, 'ಕಾವ್ಯೋದ್ಯೋಗ'ದ ಹಿನ್ನೆಲೆ, 'ಕಾವ್ಯೋದ್ಯೋಗ' ಸಿದ್ದಾಂತ, ಸಾಹಿತ್ಯ ಮತ್ತು ವಿಮರ್ಶೆ, 'ಕಾವ್ಯೋದ್ಯೋಗ'ದಲ್ಲಿ ಬೇಂದ್ರೆಯವರ ವಿಚಾರಗಳು, ಬೇಂದ್ರೆಯವರ ವೈಜ್ಞಾನಿಕ ವಿಚಾರಗಳು, ಬೇಂದ್ರೆಯವರ ಹುಟ್ಟುಹಬ್ಬಗಳ ಆಚರಣೆ

About the Author

ಬಿ.ಬಿ. ರಾಜಪುರೋಹಿತ
(20 May 1935 - 24 June 2020)

ಭಾಷಾ ವಿಜ್ಞಾನಿ ಬಿ.ಬಿ. ರಾಜಪುರೋಹಿತ  ಅವರು  ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. 1935ರ ಮೇ 20ರಂದು ಜನಿಸಿದರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪಡೆದಿರುವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. A ...

READ MORE

Related Books