ಲೇಖಕ ಡಾ. ಪ್ರಕಾಶ ಗ. ಖಾಡೆ ಅವರ ವಿಮರ್ಶಾ ಸಂಕಲನ ಕೃತಿ ʻಕಾವ್ಯ ನಾದದ ಧ್ಯಾನʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಸಂಗಮೇಶ ಸಣ್ಣತಂಗಿ ಅವರು, “ಡಾ. ಪ್ರಕಾಶ ಗ. ಖಾಡೆ ಅವರು ಕನ್ನಡದ ಹೆಸರಾಂತ ಸಾಹಿತಿಗಳಲ್ಲಿ ಒಬ್ಬರು. ತಮ್ಮ ಕಥೆ, ಕವಿತೆ, ನಾಟಕ ರಚನೆ ಹಾಗೂ ವಿಮರ್ಶೆ ಬರಹಗಳ ಮೂಲಕ ನಾಡಿನಲ್ಲಿಯೇ ಗುರುತಿಸಿಕೊಂಡವರು. ಪದ್ಯಗಳಂತೆ ಇವರ ಗದ್ಯ ಬರಹಗಳಲ್ಲಿ ಒಂದು ಲಯಗಾರಿಕೆ ಇದೆ. ಆಧುನಿಕ ಕನ್ನಡ ಕಾವ್ಯದ ಅಧ್ಯಯನವನ್ನು ಇವರು ನಿರಂತರವಾಗಿ ಇಟ್ಟುಕೊಂಡು ಬಂದಿದ್ದಾರೆ. ಅದರ ಫಲಶೃತಿ ಈ ಕೃತಿ. 'ಕಾವ್ಯ ನಾದದ ಧ್ಯಾನ' ಕೃತಿಯಲ್ಲಿನ ವಿಮರ್ಶೆ ಬರಹಗಳೆಲ್ಲ ಕನ್ನಡ ಕಾವ್ಯ ಚರಿತ್ರೆಯ ಮರು ಅಧ್ಯಯನಕ್ಕೆ ತೋರು ಬೆರಳಾಗಿವೆ. ತುಂಬಾ ದಟ್ಟವಾಗಿ ಕವಿಗಳ ಕಾವ್ಯಾವಲೋಕನ ಮಾಡಿರುವ ಇಲ್ಲಿನ ಪ್ರತಿ ರಚನೆಗಳು ಡಾ. ಪ್ರಕಾಶ ಗ. ಖಾಡೆ ಅವರ ಮೇರು ಅಧ್ಯಯನಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...
READ MORE