ಬೇಂದ್ರೆ ಕಾವ್ಯ ಕುರಿತು ಲೇಖಕರು ಬರೆದು ಪ್ರಕಟಿಸಿದ್ದ ಎರಡು ಲೇಖನಗಳು ಹಾಗೂ ಇತ್ತೀಚಿನ ಅವರ ಒಂದು ಭಾಷಣ ಒಳಗೊಂಡ ಕೃತಿ ’ಕರುಳ ಬಳ್ಳಿಯ ಸೊಲ್ಲು’
ಬೇಂದ್ರೆ ಅವರ ಸಮಗ್ರ ಕಾವ್ಯ ಒಂದೆಡೆ ಲಭ್ಯವಿಲ್ಲ. ವಿಮರ್ಶಕರ ಬಿಡಿ ಲೇಖನಗಳು ಇರುವುದಾದರೂ, ಒಂದು ಪದ್ಯದ ಸಾಲಿನ ವಿವರ ಬೇಕೆಂದಾಗ ಸೂಕ್ತ ಪರಾಮರ್ಶನ ಗ್ರಂಥ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಕನ್ನಡ ಕಾವ್ಯವಲಯದಲ್ಲಿ ಬೇಂದ್ರೆ ಅವರ ಸ್ಥಾನದ ಬಗ್ಗೆ ಸಂಕೋಚದಿಂದ ಬರೆಯುವವರೂ ಇದ್ದಾರೆ. ಪಶ್ಚಿಮದ ಮಾದರಿಯಲ್ಲಿ ಇಲ್ಲೊಂದು ಅಕಾಡೆಮಿಕ್ ಪ್ರಪಂಚ ಇರಬೇಕು ಎಂಬುದು ತಮ್ಮ ವಾದವಲ್ಲ; ಆದರೆ, ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಬೇಂದ್ರೆ ಸಹ ಒಬ್ಬರು ಎಂದು ಹಕ್ಕೊತ್ತಾಯ ಮಂಡಿಸಿ, ವಸಾಹತುಶಾಹಿಯ ಕೀಳರಿಮೆಯಿಂದ ಹೊರ ಬರಬೇಕು ಎಂದು ಸ್ವತಃ ಲೇಖಕರು ಕೃತಿಯಲ್ಲಿ ಆಶಯ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಇಲ್ಲಿಯ ಲೇಖನಗಳು ಚಿಂತನಾರ್ಹವಾಗಿವೆ.
ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...
READ MORE