‘ಕಾರಂತರ ಕಾದಂಬರಿಗಳು- ಮಹಾರಾಷ್ಟ್ರೀಯರ ದೃಷ್ಟಿಯಲ್ಲಿ’ ವಿರೂಪಾಕ್ಷ ಕುಲಕರ್ಣಿ ಅವರ ಕೃತಿ. ಮರಾಠಿಗೆ ಕಾರಂತರ ಹಲವು ಕಾದಂಬರಿಗಳು ಅನುವಾದಗೊಂಡಿಗೆ. ಅವುಗಳ ಪೂರ್ಣಾಂಶದ ವಿಮರ್ಶೆಗೆಗಳೂ ಪ್ರಕಟವಾಗಿವೆ. ಅದೂ ಒಬ್ಬರಿಂದಲೇ ಆ ವಿಮರ್ಶೆಯ ಕನ್ನಡಾನುವಾದವನ್ನು ಮಾಡಿಸಿ, ಅವುಗಳ ಸಂಗ್ರಹವನ್ನು ಕನ್ನಡದಲ್ಲಿ ಹೊರತರಬೇಕೆಂಬುದು ನಮ್ಮ ಕೇಂದ್ರದ ಉದ್ದೇಶವಾಗಿತ್ತು ಎಂಬುದು ಬೋಳಂತಕೋಡಿ ಈಶ್ವರ ಭಟ್ಟರ ಮಾತು. ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿರುವ ಅವರು ‘ಕಾರಂತರ ಬಗ್ಗೆ ಅನ್ಯ ಭಾಷಿಕರು ಏನು ಅಭಿಪ್ರಾಯ ವ್ಯಕ್ತ ಮಾಡುತ್ತಾರೆಂಬುದು ಇದರಿಂದ ವ್ಯಕ್ತವಾಗುವುದು, ಈ ಉಪಕ್ರಮ ನವೀನವಾದುದು ಎಂದು ನನ್ನ ಭಾವನೆ ಎನ್ನುತ್ತಾರೆ. ಮರಾಠಿಗರಿಗೆ ಪರಿಚಿತವಿರುವ ಕನ್ನಡ ಲೇಖಕರಲ್ಲಿ ಕಾರಂತರೇ ಅತಿ ಮೆಚ್ಚಿನವರು ಹಾಗಾಗಿ ಅವರ ಗ್ರಹಿಕೆಯ ಮೇಲೆ ಬೆಳಕು ಚೆಲ್ಲುವ ಕೃತಿ ಇದಾಗಿದೆ.
ವಿರೂಪಾಕ್ಷ ಕುಲಕರ್ಣಿ ಅವರ ಊರು ಬೆಳಗಾವಿ. 1962ರಿಂದ ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಮೊದಲಿನ ಒಂದೆರಡು ವರ್ಷ ಮುಂಬಯಿಯ ಬಿ. ಈ.ಎಸ್.ಟಿ.ಯಲ್ಲಿ ತರುವಾಯ ಇಂದಿನವರೆಗೆ ಪುಣೆಯ ಭಾರತ ಸರಕಾರದ ಹಾಯ್ ಎಕ್ಸ್ ಪ್ಲೋ ಸಿವ್ಹ ಕಾರಖಾನೆಯಲ್ಲಿ ಇನ್ ಸ್ಟ್ರೂಮೆಂಟ್ ಇಂಜಿನೀಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯ, ಸಂಗೀತಗಳಲ್ಲಿ ಆಸಕ್ತಿ ಹೊಂದಿರುವ ಅವರು ಕನ್ನಡ ನಾಡು-ನುಡಿಗಳನ್ನು ಕುರಿತು ಮರಾಠಿಯ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಅವ್ಯಾಹತ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಅನುವಾದದಲ್ಲಿಯೂ ತೊಡಗಿಕೊಂಡಿರುವ ಅವರು ಕನ್ನಡ ಹಾಗೂ ಮರಾಠಿ ಭಾಷೆಯ ಬಾಂಧವ್ಯ ಬೆಸೆಯುವಂತಹ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ...
READ MORE