ಕಣ್ಣೋಟ

Author : ಎಚ್.ಎಸ್. ಸತ್ಯನಾರಾಯಣ

Pages 250

₹ 250.00




Year of Publication: 2021
Published by: ಅಲಂಪು ಪ್ರಕಾಶನ
Address: ಬಸವೇಶ್ವರನಗರ, ಬೆಂಗಳೂರು- 560079
Phone: 9738482935

Synopsys

ಲೇಖಕ ಡಾ. ಎಚ್.ಎಸ್. ಸತ್ಯನಾರಾಯಣ ಅವರ ಎರಡನೆಯ ವಿಮರ್ಶಾ ಸಂಕಲನ ‘ಕಣ್ಣೋಟ' . ಕೃತಿಯಲ್ಲಿ ಪ್ರಕಾಶನಕರೇ ಬೆನ್ನುಡಿಯ ಮಾಡುಗಳನ್ನು ಬರೆದಿದ್ದು, “ 'ಕಣ್ಣೋಟ'ದಲ್ಲಿ ಮೂರು ತಲೆಮಾರಿನ ಲೇಖಕರ ಕೃತಿಗಳ ವಿಮರ್ಶೆಯಿದೆ. ಸಾಹಿತ್ಯದಲ್ಲಿ ಅಪೂರ್ವ ಸಾಧನೆ ಮಾಡಿಯೂ ನಿರ್ಲಕ್ಷ್ಯಕ್ಕೆ ಒಳಗಾದ ಅನೇಕ ಹಿರಿಯರ ಸಮಗ್ರ ಕಾವ್ಯ ವಿವೇಚನೆ ಇಲ್ಲಿದೆ. ಹಿರಿಯರ ಮತ್ತು ಸಮಕಾಲೀನರ ಕೃತಿಗಳನ್ನು ಸದಭಿರುಚಿಯ ಓದಿನಿಂದ ಆಸ್ವಾಧಿಸುತ್ತಲೇ ಹೊಸ ಲೇಖಕರ ಬರಹಗಳತ್ತ ತೀವ್ರ ಕುತೂಹಲದಿಂದ ಕಣ್ಣು ಹಾಯಿಸುತ್ತ ಅವರ ಬರಹಗಳನ್ನು ಉತ್ತೇಜಿಸುವ ಮನೋಧರ್ಮದ ವಿಮರ್ಶಕರಾದ ಡಾ. ಎಚ್. ಎಸ್. ಸತ್ಯನಾರಾಯಣ ಅವರ ಈ ವಿಮರ್ಶಾ ಬರಹಗಳಿಂದ ಕೃತಿ ಮತ್ತು ಓದುಗರ ಬಾಂಧವ್ಯ ಗಟ್ಟಿಯಾಗಬಲ್ಲದು. ವಿಮರ್ಶಾ ಮಾನದಂಡಗಳ ಹೇರಿಕೆಯ ಭಾರವಿಲ್ಲದ ಈ ವಿಮರ್ಶೆಯ ಮಾದರಿಯು ಓದುಗರ ಅರಿವನ್ನು ಹೆಚ್ಚಿಸುವಲ್ಲಿ ಆಸಕ್ತಿ ವಹಿಸುತ್ತವೆ. ಕೃತಿಯೊಂದನ್ನು ಅದರೆಲ್ಲ ಆಯಾಮಗಳಲ್ಲಿ ಹಿಡಿದಿಡುತ್ತ, ಮೃದು ಮಾತುಗಳಲ್ಲಿ ತಿದ್ದುತ್ತ, ಮೆಲುದನಿಯಲ್ಲಿ ಭಿನ್ನಾಭಿಪ್ರಾಯಗಳನ್ನು ದಾಖಲಿಸುತ್ತ ಸಾಗುವ ಈ ಕ್ರಮ ಬರಹಗಾರರಿಗೂ ಓದುಗರಿಗೂ ಅವಶ್ಯವಾದ ಆವರಣವೊಂದನ್ನು ಸೃಷ್ಟಿಮಾಡಬಲ್ಲ ಗುಣವುಳ್ಳದ್ದು. ಅದರಲ್ಲೂ ಹೊಸ ತಲೆಮಾರಿನ ಲೇಖಕರ ಬಗೆಗಿನ ಕಠಿಣವಲ್ಲದ ನಿಲುವಿನ ಬಗೆ ಉತ್ತೇಜನಕಾರಿಯಾಗಿರುವಂಥದ್ದು. ಈ ಬಗೆಯ ಸಹೃದಯ ವಿಮರ್ಶೆಗೆ ಒತ್ತನ್ನು ನೀಡುವುದು ಈ ಹೊತ್ತಿನ ತುರ್ತು ಕೂಡ ಹೌದು. ನಮ್ಮ ಪ್ರಕಾಶನ ಮೊದಲ ಪ್ರಕಟಣೆಯಾಗಿ 'ಕಣ್ಣೋಟ' ಪ್ರಕಟವಾಗುತ್ತಿರುವುದು ಹೆಮ್ಮೆ ಪಡಬಹುದಾದ ಸಂಗತಿ” ಎಂಬುದಾಗಿ ಹೇಳಿದ್ದಾರೆ.

About the Author

ಎಚ್.ಎಸ್. ಸತ್ಯನಾರಾಯಣ

ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...

READ MORE

Awards & Recognitions

Related Books