ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆಯ ಭಾಗ-1ರ ಅಂಗವಾಗಿ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಕೃತಿ-ಕನ್ನಡ ಸಾಹಿತ್ಯ ಸಮೀಕ್ಷೆ. ಕನ್ನಡ ಸಾಹಿತ್ಯ ಆರಂಭವು ಸುದೀರ್ಘವಾದ ಇತಿಹಾಸ ಹೊಂದಿದೆ. ಆರಂಭಕ್ಕೆ ಸಾಹಿತ್ಯವು ಯಾವ ಭಾಷೆಯಿಂದ ಪ್ರೇರಣೆ ಪಡೆಯಿತು? ಯಾವ ಯಾವ ಕವಿಗಳು ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ಶ್ರಮಿಸಿದರು? ಕನ್ನಡ ಸಾಹಿತ್ಯ ಬದಲಾಗುತ್ತಾ ಬಂದ ಪರಿ, ಹೀಗೆ ಬದಲಾಗಿದ್ದರ ಪರಿಣಾಮ ಕನ್ನಡ ಸಾಹಿತ್ಯದ ಸೌಂದರ್ಯವರ್ಧನೆ, ಗುಣಮಟ್ಟ ಹೀಗೆ ಇನ್ನಿತರೆ ಅಂಶಗಳ ಹಿನ್ನೆಲೆಯಲ್ಲಿ ನಡೆದ ವಿಮರ್ಶೆ ಎಲ್ಲವೂ ಈ ಕೃತಿಯಲ್ಲಿ ಒಳಗೊಂಡಿವೆ.
ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...
READ MORE