ಕನ್ನಡ ನಾಟಕ ಮತ್ತು ರಂಗಭೂಮಿ ಕುರಿತ ವಿಮರ್ಶಾಕೃತಿಯೇ ‘ಕನ್ನಡ ನಾಟಕ ಮತ್ತು ರಂಗಭೂಮಿ’. ಲೇಖಕ, ವಿಮರ್ಶಕ ಬಸವರಾಜ ಡೋಣೂರ ಬರೆದಿದ್ದಾರೆ. 'ರಂಗಭೂಮಿ' ಒಂದು ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕನ್ನಡಿ. ಲಲಿತ ಕಲೆಗಳನ್ನೆಲ್ಲ ತನ್ನಲ್ಲಿ ಸಮಾವೇಶಗೊಳಿಸಿಕೊಂಡ ಅದು ಒಂದು ಸಂಕೀರ್ಣ ಸೃಷ್ಟಿ; ಅಭಿವ್ಯಕ್ತಿ ಸಾಧ್ಯತೆಗಳನ್ನೆಲ್ಲ ಅಳವಡಿಸಿಕೊಂಡ ಸಮಗ್ರ ಕಲೆ, ಅನುಕರಣೆ ಮತ್ತು ರಂಜನೆಯನ್ನು ಮುಖ್ಯ ಆಶಯವಾಗಿರಿಸಿಕೊಂಡು, ಸಾಹಿತ್ಯ-ಸಂಗೀತ- ಅಭಿನಯ ಪ್ರಧಾನವಾಗಿ, ಪ್ರತಿಯೊಂದು ನಾಡಿನ-ಜನಾಂಗದ ಸ್ವಭಾವ ಚಿತ್ರವನ್ನು ಸಹಜವಾಗಿ ಅಭಿವ್ಯಕ್ತಿಸುತ್ತದೆ. ಭಾರತೀಯ ಹಿನ್ನೆಲೆಯಲ್ಲಿ ನೋಡಿದರೆ, ಸಂಸ್ಕೃತ ರಂಗಭೂಮಿ ತುಂಬ ಪ್ರಾಚೀನ ಮತ್ತು ಶ್ರೀಮಂತ. ಆದರೆ ಕನ್ನಡ ರಂಗಭೂಮಿ ಅಷ್ಟೊಂದು ದೀರ್ಘ ಪರಂಪರೆ ಹೊಂದಿಲ್ಲ. ಕನ್ನಡ ನಾಟಕ ಪರಂಪರೆಯಂತೂ ಇನ್ನೂ ಅರ್ವಾಚೀನವಾದುದು; ಆಧುನಿಕ ಕಾಲದಿಂದಲೇ ಅದರ ಚರಿತ್ರೆ ಆರಂಭವಾಗುತ್ತದೆ. ಅದಕ್ಕೆ ಕಾರಣಗಳನ್ನು ಹುಡುಕಲು ಈಗಾಗಲೇ ಅನೇಕರು ಪ್ರಯತ್ನಿಸಿದ್ದಾರೆ. ಪೂರ್ಣ ಸತ್ಯಸಂಗತಿ ಇನ್ನೂ ಪ್ರಕಟವಾಗಿಲ್ಲ. ನಾಟಕ ರಚನೆಯಂತೆ ಈ ಕುರಿತ ಅಧ್ಯಯನ, ವಿಮರ್ಶೆ, ವಿವೇಚನೆಗಳು ಕೂಡ ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ, ಅಷ್ಟಾಗಿ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ. ನಾಟಕ ವಿಮರ್ಶಕರ ಸಂಖ್ಯೆಯೂ ತೀರ ಕಡಿಮೆ: ಬೆರಳೆಣಿಕೆಯಷ್ಟು ಮಾತ್ರ. ಕುರ್ತಕೋಟಿ, ಆಮೂರ, ಗಿರಡ್ಡಿ, ಮರುಳಸಿದ್ದಪ್ಪ, ಪ್ರಸನ್ನ, ಅಕ್ಷರ, ಕೀರಂ, ಮೊದಲಾದ ಕೆಲವರನ್ನು ಬಿಟ್ಟರೆ, ಇತರ ಹೆಸರಾಂತ ವಿಮರ್ಶಕರ ಲಕ್ಷವೆಲ್ಲ ಕಾವ್ಯ, ಕಥೆ, ಕಾದಂಬರಿಗಳತ್ತಲೇ ಹೆಚ್ಚು ಕೇಂದ್ರೀಕೃತವಾಗಿರುವುದು ಎದ್ದು ಕಾಣುತ್ತದೆ. ಹೀಗೆ ಒಂದು ದೃಷ್ಟಿಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ನಾಟಕ ಕ್ಷೇತ್ರವನ್ನು ವಿಶೇಷ ಆಸಕ್ತಿಯಿಂದ ಆಯ್ದುಕೊಂಡ ವಿಮರ್ಶಕರಲ್ಲಿ ಬಸವರಾಜ ಡೋಣೂರ ಪ್ರಮುಖರು. ರಂಗಭೂಮಿ ಮತ್ತ ನಾಟಕಗಳ ಕುರಿತ ಸಂಶೋಧನಾತ್ಮಕ ವಿಮರ್ಶಾ ಲೇಖನಗಳು ಈ ಕೃತಿಯಲ್ಲಿವೆ.
ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು. 1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...
READ MORE