’ಕಲಾ ಸಂಸ್ಕೃತಿ’ ಕೃತಿಯು ಹಿರಿಯ ಲೇಖಕ-ಸಾಹಿತಿ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರ ಸಾಹಿತ್ಯಿಕ ಹಾಗೂ ಕಲೆಯ ಕುರಿತ ವಿಮರ್ಶಾತ್ಮಕ ಬರವಣಿಗೆಯಾಗಿದೆ. ಈ ಕೃತಿಯು 12 ಅಧ್ಯಾಯಗಳನ್ನು ಹೊಂದಿದೆ; ಭಾರತೀಯ ಚಿತ್ರಕಲೆಯಲ್ಲಿ ಶೃಂಗಾರ ಲಹರಿ, ಕರ್ನಾಟಕದಲ್ಲಿ ಚಿತ್ರಕಲಾಪರಂಪರೆ, ಕಲೆ ಮತ್ತು ಪ್ರಾಯೋಗಿಕ ವಿಮರ್ಶೆ, ಡಿ.ವಿ.ಜಿ. ಅವರ ಸೌಂದರ್ಯ ಮೀಮಾಂಸೆ, ಅಮೂರ್ತತೆ ಮತ್ತು ಅಮೂರ್ತ ಕಲೆ: ವಿವಿಧ ಕಲೆಗಳ ನಡುವಣ ಸಂಬಂಧ, ಸಂಯೋಜನೆ : ಒಂದು ಟಿಪ್ಪಣಿ, ರೇಖಾಚಿತ್ರ : ಪ್ರಾಚೀನ ಪಾಶ್ಚಾತ್ಯ, ರೇಖಾ ಚಿತ್ರಕಲೆ : ಚೈನಾ ಮತ್ತು ಜಪಾನ್, ದೃಶ್ಯಕಲೆಯ ಒಲವು ನಿಲುವುಗಳು, ಕಲೆಯ ಸಂಕೀರ್ಣತೆ ಹಾಗೂ ಅನುಬಂಧವನ್ನು ಒಳಗೊಂಡಿದೆ.
‘ಕಲೆ ಹಾಗೂ ಸಾಹಿತ್ಯದ ಕುರಿತು ವಿಮರ್ಶಿಸುವ ಲೇಖಕ ಕಲೆಯೆಂಬುದು ಅದು ಸೃಷ್ಟಿಯಾದ ಸಂದರ್ಭಕ್ಕೆ, ನಿಸ್ಕೃತಿಕ ಸಂದರ್ಭಕ್ಕೆ ಸೇರಿದ್ದು, ನಿರ್ದಿಷ್ಟ ಸಂಸ್ಕೃತಿಯ ಫಲ, ಯಾವುದೇ ಕಲಾಸೃಷ್ಟಿ ಸಾಂಸ್ಕೃತಿಕ ಸಂದರ್ಭದಿಂದ ಹೊರತಾಗಿ ಸಾಧ್ಯವಿಲ್ಲ. ಆದ್ದರಿಂದ ಯಾವ ಸಮಾಜದಲ್ಲಿ, ಪರಿಸರ ಸಂದರ್ಭದಲ್ಲಿ ಅದು ರೂಪುಗೊಂಡು ಸೃಷ್ಟಿಯಾಯಿತೋ, ಯಾವೆಲ್ಲ ಮೌಲಿಕಾಂಶಗಳು ಆ ಕಲೆ ರೂಪುಗೊಳ್ಳಲು ಕಾರಣವಾದುವೊ, ಅವೆಲ್ಲ ಕಾರಣಗಳ ಅಂಶಗಳ ಆಂದ್ರೆ ದೃಶ್ಯಕಲೆಯ ಮೆಟ್ಟಿಗಂತ ಅತ್ಯಂತ ಮಹತ್ವದ್ದಾಗುತ್ತದೆ ಎನ್ನುತ್ತಾರೆ. ವಸ್ತು ವಿಷಯ, ರಚನಾತಂತ್ರ, ಸಾಮಗ್ರಿ, ಮಾದ್ಯಮ, ರಚನಾ ಶೈಲಿ ಎಲ್ಲವೂ ಆಯಾ ಸಮಾಜಕ್ಕೆ, ಕೃತಿಗೆ, ಕಾಲಕ್ಕೆ ವಿಶಿಷ್ಟ, ಕಲೆ ಮತ್ತು ಸೌಂದರ್ಯ ಪರಿಕಲ್ಪನೆ ಅವಿನಾ ಸಂಬಂಧವನ್ನು ಸಂಸ್ಕೃತಿ ಎಂಬುದು ಒಂದು ಸಮಾಜದ ನಿರ್ದಿಷ್ಟ, ವಿಶಿಷ್ಟ ಆಲೋಚನಾ ವಿಧಾನ; ಸುತ್ತಲ ಜೀವನ ಜಗತ್ತನ್ನು ಕಾಣುವ ಹಾಗೆ ಕಲೆಯಲ್ಲಿ ಅದು ಅಭಿವ್ಯಕ್ತಿ ಪಡೆಯುತ್ತದೆ, ಕಲೆ ಸಂಸ್ಕೃತಿಯ ಒಂದು ಮುಖ, ಇಲ್ಲಿಯ ಬಿಡಿ ದೇಶವನ್ನು ಕಲಾಸಂಬಂಧಿತ ವಿಚಾರಗಳನ್ನು ಒಳಗೊಂಡಿವೆ’ ಎಂದು ಲೇಖಕರು ಹೇಳಿದ್ದಾರೆ.
ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು. ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...
READ MORE