ಕನ್ನಡ ಸಾಹಿತ್ಯ ಮೀಮಾಂಸೆಯ ಎರಡನೇ ಸಂಪುಟ ಇದು. ಮೊದಲನೇ ಸಂಪುಟದಲ್ಲಿ ಕನ್ನಡ ಸಾಹಿತ್ಯದ ಮೀಮಾಂಸೆಯನ್ನು ರೂಪಿಸಬಹುದಾದ ಲೇಖನ-ಬರಹಗಳನ್ನು ಸಂಪಾದಿಸಿ ಪ್ರಕಟಿಸಲಾಗಿತ್ತು. ಎರಡನೇ ಸಂಪುಟವು ಕನ್ನಡದ ಮೀಮಾಂಸೆಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಯೋಜನೆಯ ಭಾಗವಾಗಿ ಎರಡು ಸಂಪುಟಗಳನ್ನು ಪ್ರಕಟಿಸಲಾಗಿತ್ತು. ಎರಡನೆ ಸಂಪುಟವನ್ನು ಲಡಾಯಿ ಪ್ರಕಾಶನ ಮರು ಮುದ್ರಣ ಮಾಡಿದೆ.
ರಹಮತ್ ತರೀಕೆರೆ ಅವರು ಕನ್ನಡ ಮೀಮಾಂಸೆಯನ್ನು ರೂಪಿಸುವ ಯಶಸ್ವಿ ಪ್ರಯತ್ನ ಮಾಡಿದ್ದಾರೆ. ಸಂಸ್ಕೃತದ ಮೀಮಾಂಸೆಯೇ ಭಾರತದ ಮೀಮಾಂಸೆ ಎಂಬ ಚರ್ಚೆ- ನಂಬಿಕೆ ವ್ಯಾಪಕ. ಆದರೆ, ಕನ್ನಡಕ್ಕೆ ಕನ್ನಡದ್ದೇ ಆದ ಮೀಮಾಂಸೆ ಇದೆ ಎಂದು ಪ್ರತಿಪಾದಿಸಿ, ಇದ್ದರೆ ಅದರ ಸ್ವರೂಪ ಏನು? ಅದು ಹೇಗೆ ಸಂಸ್ಕೃತ ಮೀಮಾಂಸೆಗಿಂತ ಭಿನ್ನ? ಎಂಬುದನ್ನು ಈ ಗ್ರಂಥದಲ್ಲಿ ಚರ್ಚಿಸಲಾಗಿದೆ. ಪ್ರಮುಖ ಆಶಯಗಳನ್ನು ಇಟ್ಟುಕೊಂಡು ತರೀಕೆರೆ ಅವರು ಮೀಮಾಂಸೆ ರೂಪಿಸುವ ಕೆಲಸ ಮಾಡಿದ್ದಾರೆ. ಮೀಮಾಂಸೆಯ ರೂಪಿಸುವ ದಾರಿಯಲ್ಲಿನ ಅಧ್ಯಾಯಗಳು ಹೀಗಿವೆ- ತನ್ನತನದ ಹುಡುಕಾಟ, ಸೃಷ್ಟಿ ಮೀಮಾಂಸೆ, ವಸ್ತು ಮೀಮಾಂಸೆ, ಪ್ರಕಾರ ಮೀಮಾಂಸೆ, ಪ್ರೇರಣೆ ಮೀಮಾಂಸೆ, ಪ್ರಭಾವ ಮೀಮಾಂಸೆ, ವಿಧಾನ ಮೀಮಾಂಸೆ, ಭಾಷಾ ಮೀಮಾಂಸೆ, ಕೃತಿ ಮೀಮಾಂಸೆ, ಓದುಗ ಮೀಮಾಂಸೆ, ಪರಿಣಾಮ ಮೀಮಾಂಸೆ, ವಿಶಿಷ್ಟ ಲಕ್ಷಣಗಳು ಎಂಬ 14 ಅಧ್ಯಾಯಗಳಿವೆ. ಅನುಬಂಧವು ಪುಸ್ತಕದ ಮಹತ್ವ ಹೆಚ್ಚಿಸಲು ಕಾರಣವಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...
READ MORE