ಕವಿ ಹರಿಹರನ ರಗಳೆಗಳನ್ನು ಮರು ಓದಿಗೆ ಒಳಪಡಿಸಿ, ಆಗ ಹೊರ ಹೊಮ್ಮಿದ ಹೊಸ ನೋಟದ, ಬಹು ನಿಲುವಿನ, ಬಹು ನೆಲೆಯ ಅರ್ಥಪೂರ್ಣ ಸಂವಾದಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ರಗಳೆಗಳ ವೈವಿಧ್ಯತೆ ಮತ್ತು ಹರಿಹರ ಪ್ರತಿಭೆ , ವಚನ ಚಳುವಳಿ: ಮೌಖಿಕ ಮತ್ತು ಲಿಖಿತ ಪರಂಪರೆಗಳ ಗ್ರಹಿಕೆ , ತಮಿಳು ಶೈವ ಪರಂಪರೆ ಮತ್ತು ರಗಳೆಗಳು. ,ಹರಿಹರನ ರಗಳೆಗಳು 'ಯಾಜಮಾನ್ಯ'ದ ನೆಲೆಗಳು ,ಬಹುಮುಖಿ ಶೈವ ಧಾರೆಗಳು ಮತ್ತು ಹರಿಹರ ,ಹರಿಹರನ ರಗಳೆಗಳು: ಸಾಮಾಜಿಕ ದರ್ಶನ; ಭಕ್ತಿಯ ಸ್ವರೂಪ , ರಗಳೆಗಳಲ್ಲಿ ಭಕ್ತಿಯ ಸ್ವರೂಪ , ಪೂಜನ ಸಂಸ್ಕೃತಿ ಮತ್ತು ಭಕ್ತಿ ಸಿದ್ದಾಂತದ ನೆಲೆಗಳು; ಹರಿಹರನ ರಗಳೆಗಳು : ಹೊಸ ಚೌಕಟ್ಟಿನ ಶೋಧದಲ್ಲಿ , ಹರಿಹರನ ರಗಳೆಗಳು: ಪರಿವಾರ ನಿರ್ಮಾಣ ಮತ್ತು ಪರ್ಯಾಯ ನಿರ್ಮಾಣದ ಕಥನಗಳು ,ರಗಳೆಗಳ ಕಥನ ಕ್ರಮವೂ, ಲೋಕದೃಷ್ಟಿಯೂ...
ಶಿವಾನಂದ ಎಸ್. ವಿರಕ್ತಮಠ ಅವರು ಜನಿಸಿದ್ದು 1965 ಜೂನ್ 1ರಂದು. ಬಳ್ಳಾರಿ ಜಿಲ್ಲೆ ಹೊಸಪೇಟೆಯವರಾದ ಇವರು ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯಾಸಕ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ...
READ MORE