ಈ ಕಿರುಗ್ರಂಥದಲ್ಲಿ ೯೦ರ ದಶಕದಿಂದೀಚೆಗೆ ಶೋಧನೆಗೊಂಡಿರುವ ಶ್ರೀ ವೈಷ್ಣವ ಹರಿದಾಸ ಸಾಹಿತ್ಯದ ಸ್ವರೂಪವನ್ನು ಸಮೀಕ್ಷೆ ಮಾಡಲಾಗಿದ್ದು, ಶ್ರೀವೈಷ್ಣವ ವಿಶಿಷ್ಟಾದೈತ ಸಾಹಿತ್ಯವು ಕನ್ನಡ ಓದುಗರಿಗೆ ಹೊಸ ಓದಾಗಿರುವುದರಿಂದ ಅದರ ಪ್ರವೇಶಕ್ಕಾಗಿಪ್ರಸ್ತಾವನೆ ಮತ್ತು ವೈಷ್ಣವ ತತ್ವ ಧರ್ಮದ ಪರಿಚಯ ಹಾಗೂ ಈ ವರೆಗೆ ಈ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಯ ಜೊತೆಗೆ ವೈಷ್ಣವ ಹರಿದಾಸ ಸಾಹಿತ್ಯದ ಪ್ರಮುಖ ಲಕ್ಷಣಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಕನ್ನಡ ಶಾಸನ, ಭಾಷೆ, ದಾಸ ಸಾಹಿತ್ಯ, ಶಾಸ್ತ್ರೀಯ ಸಾಹಿತ್ಯದಲ್ಲಿ ಅಪಾರವಾಗಿ ದುಡಿದವರು ನಾ. ಗೀತಾಚಾರ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಹೆಜ್ಜಾಜಿಯಲ್ಲಿ 1958 ಫೆಬ್ರವರಿ 02 ರಂದು ಜನಿಸಿದರು. ತಂದೆ ನಾರಾಯಣಸ್ವಾಮಿ, ತಾಯಿ ಲಕ್ಷ್ಮೀದೇವಮ್ಮ. ಶೇಷಾದ್ರಿಪುರಂನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ನಾಟಕ,ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಹಲವು ರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. `ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವತ’ ಅವರ ಪ್ರಮುಖ ಕೃತಿ. ‘ಆಳ್ವಾರರ ಹಾಡುಗಳು’ ಅವರ ಅನುವಾದಿತ ಕೃತಿ. ...
READ MORE