ಲೇಖಕರಾದ ಕುಮಾರ ಇಂದ್ರಬೆಟ್ಟ, ಶಿವಾನಂದ ಕಲಬುರಗಿ ಹಾಗೂ ವೀರಭದ್ರಯ್ಯ ಹಿರೇಮಠ ಅವರು ಸಂಯುಕ್ತವಾಗಿ ಬರೆದ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ-ಹಲವು ನುಡಿಗಳ ನಡಿಗೆ. ಇಲ್ಲಿ ಒಟ್ಟು 25 ಬರಹಗಳಿವೆ. ಪ್ರಾಚೀನ ಕಾಲದಲ್ಲಿ ಮಹಿಳೆ, ಪ್ರಭುತ್ವದ ಚಿಂತನೆ, ಸ್ತ್ರೀವಾದ ಮತ್ತು ದಲಿತ ಸ್ತ್ರೀವಾದ, ವಚನ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಬೆಳವಣಿಗೆ ಹೀಗೆ ಸ್ತ್ರೀಪರ ಕಾಳಜಿಯ ಬರಹಗಳು ಸಂಕಲಿಸಲಾಗಿದೆ. ಮಾತ್ರವಲ್ಲ; ಬಂಜಾರ ಸೇರಿದಂತೆ ಇತರೆ ಬುಡಕಟ್ಟು ಜನಾಂಗೀಯ ಸಾಂಸ್ಕೃತಿಕ ಬದಕನ್ನು ಕಟ್ಟಿಕೊಡುವ ಪ್ರಯತ್ನವೂ ಇದೆ. ಕನ್ನಡ ಶ್ರೇಷ್ಠ ಕಥೆ-ಕಾದಂಬರಿಗಳನ್ನು ವಿಮರ್ಶೆಗೆ ಒಳಪಡಿಸಲಾಗಿದೆ. ಸಾಹಿತಿ ಎಸ್.ಜಿ. ಹನುಮಂತರಾಯಪ್ಪ ಅವರು ಕೃತಿಗೆ ಬೆನ್ನುಡಿ ಬರೆದು ಬಹು ಆಯಾಮಗಳಲ್ಲಿ ವಿಮರ್ಶಿಸಿರುವ ಈ ಕೃತಿಯ ಉದ್ದೇಶವನ್ನು ಪ್ರಶಂಸಿಸಿದ್ದಾರೆ.
ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ ಪದವಿಯವರೆಗೂ ಶಿಕ್ಷಣ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದಿದ್ದು, ಸದ್ಯ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. `ಕಾವ್ಯಪ್ರಿಯ ಶಿವು' ಎಂಬುದು ಇವರ ಕಾವ್ಯನಾಮ. ಕೃತಿಗಳು: ಹಲವು ನುಡಿಗಳ ನಡಿಗೆ (ವಿಮರ್ಶೆ ಕೃತಿ), ಅಂತರಂಗ (ಕವನ ಸಂಕಲನ), ನೆತ್ತರಾಸಿದ ನೆಲ (ಕವನ ಸಂಕಲನ), ಬೆಂದ ಬೇರು ನೊಂದ ಚಿಗುರು( ಕವನ ಸಂಕಲನ), ಹಸಿವು ತಣಿಸಿದವಳು( ಕಥಾ ಸಂಕಲನ), ಸಾಹಿತ್ಯ ಚೇತನ (ವಿಮರ್ಶೆ ಕೃತಿ), ಯುಜಿಸಿ ನಡೆಸುವ ಎನ್ ಇ.ಟಿ. ಪರೀಕ್ಷೆಗಳ ಪ್ರಶ್ನೋತ್ತರ ಕೋಶ-2021, ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ-2021, ...
READ MORE