ಬರಹಗಾರರಾದ ಕುಂಸಿ ಉಮೇಶ್ ಅವರು ತಮ್ಮ ಸಾಮಾಜಿಕ ಮತ್ತು ಸಾಹಿತ್ಯಿಕ ಪ್ರಜ್ಞೆಯನ್ನು ಸದಾ ಜಾಗೃತವಾಗಿಟ್ಟುಕೊಂಡು ’ ಹಾದಿ ತುಂಬ ಮುಳ್ಳುಗಳು’ ಎಂಬ ವಿಮರ್ಶಾತ್ಮಕ ಲೇಖನಗಳ ಪುಸ್ತಕವನ್ನು ಹೊರತಂದಿದ್ದಾರೆ.
ಇಲ್ಲಿರುವ ಬರಹಗಳು ಬಹುತೇಕ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಾವಸ್ಥೆಗೆ ಸದಾ ಹಾತೊರೆಯುವಂತದ್ದಾಗಿದೆ. ಚಿಂತನಾಶೀಲ ಅಭಿವ್ಯಕ್ತಿ ಮತ್ತು ನಿರ್ಭೀತ ಮಾತು, ನಿರ್ವಂಚನೆಯ ಬದುಕನ್ನು ರೂಪಿಸಿಕೊಂಡು ಅಧ್ಯಾಪನ ಹಾಗೂ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದ ಕನಸನ್ನು ಸಾಕಾರಗೊಳಿಸುವಲ್ಲಿ ಶ್ರಮಿಸುತ್ತಿರುವ ಕುಂಸಿ ಉಮೇಶ್ ಅವರ ’ಹಾದಿ ತುಂಬ ಮುಳ್ಳುಗಳು’ ಪುಸ್ತಕ ಆರೋಗ್ಯ ಪೂರ್ಣ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕುಂಸಿ ಉಮೇಶ್ ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಆಗಿದ್ದರು. ...
READ MORE