ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರ ಕೃತಿ-ಹಾಡೆ ಹಾದಿಯ ತೋರಿತು. ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು, ಬೇಂದ್ರೆ ಹಾಗೂ ಪುತಿನ ಅವರ ಕವಿತೆಗಳಲ್ಲಿಯ ವೈಶಿಷ್ಟ್ಯಗಳನ್ನು ಗುರುತಿಸಿ, ತಮ್ಮದೇ ದೃಷ್ಟಿಕೋನದೊಂದಿಗೆ ವಿಶ್ಲೇಷಿಸಿದ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ಅನಂತ ಶಕ್ತಿಯ ಬಗ್ಗೆ ಈ ಮೂರು ದಿಗ್ಗಜರಲ್ಲಿ ಒಂದೇ ಭಾವ-ವಿಶ್ವಾಸ ಇರುವುದಾದರೂ, ಬುಹುತೇಕರು ನಿಸರ್ಗ-ಪ್ರಕೃತಿಯಲ್ಲಿ ದೇವನ ಇರುವನ್ನು ಕಂಡಿದ್ದಾರೆ. ಬದುಕಿನ ಬಹುತೇಕ ಸಂಗತಿಗಳಲ್ಲಿ ತಮ್ಮ ವೈವಿಧ್ಯತೆಯನ್ನು ಮೆರೆದಿದ್ದಾರೆ. ಆದರೆ, ಈ ಮೂವರು ಬದುಕಿನ ಪ್ರೀತಿಗೆ ಒಂದಲ್ಲ ಒಂದು ರೀತಿಯಲ್ಲಿ ಆದ್ಯತೆ ನೀಡಿದವರೇ ಆಗಿದ್ದು, ಪ್ರತಿಪಾದಿಸುವ ವಿಧಾನ ಬೇರೆ ಬಗೆಯದು. ಆದರೆ, ಉತ್ಕೃಷ್ಟ ಶೈಲಿಯದ್ದು. ಈ ಮೂವರ ಕವಿತೆಗಳಲ್ಲಿಯ ಸಾಮಾನ್ಯ ಅಂಶಗಳು-ವಿಶಿಷ್ಟತೆಗಳನ್ನು ಆಳವಾಗಿ ಆಧ್ಯಯನ ಮಾಡಿದ ಕೃತಿ ಇದು.
ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...
READ MORE