ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ ಪಾತ್ರಗಳಿಗೆ ವಿಶೇಷ ಆದ್ಯತೆ. ಜೀವಪರ ನಿಲುವು ಪ್ರಗತಿಪರ ಆಶಯಗಳು ಅವರ ಸ್ತ್ರೀಪಾತ್ರಗಳಲ್ಲಿ ಎದ್ದು ಕಾಣುವ ಅಂಶ. ’ಯಯಾತಿ’ಯ ಚಿತ್ರಲೇಖೆ, ’ಅಗ್ನಿ ಮತ್ತು ಮಳೆ’ಯ ನಿತ್ತಿಲೆ, ’ಹಯವದನ’ದ ಪದ್ಮಿನಿ, ’ನಾಗಮಂಡಲ’ದ ರಾಣಿ ಹೀಗೆ ಜೀವಂತಿಕೆಯಿಂದ ಕೂಡಿದ ಪಾತ್ರಗಳು ಗಮನ ಸೆಳೆಯುತ್ತವೆ. ಕಾರ್ನಾಡರ ಸ್ತ್ರೀಪಾತ್ರಗಳ ಅಧ್ಯಯವನ್ನು ಮಮತಾರಾವ್ ಸೊಗಸಾಗಿ ಮಾಡಿದ್ದಾರೆ.
ಮುಂಬೈ ನಿವಾಸಿಯಾಗಿರುವ ಮಮತಾ ರಾವ್ ಅವರು ಮೂಲತಃ ಮಂಗಳೂರಿನವರು. ಜನಿಸಿದ್ದು 1957ರ ಜನೆವರಿ 21. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಮುಂಬಯಿ ವಿ.ವಿ.ಯಿಂದ ಕನ್ನಡ ಎಂ.ಎ.ಯನ್ನು ವರದರಾಜ ಸ್ವರ್ಣಪದಕ ಮತ್ತು ಮಹಾರಾಷ್ಟ್ರ ರಾಜ್ಯಪಾಲರ ಸ್ವರ್ಣಪದಕ ಪಡೆದ ವಿದ್ಯಾರ್ಥಿನಿ ಆಗಿದ್ದರು. ಗಿರೀಶ ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ ಸಂವೇದನೆ ಸಂಶೋಧನೆಗೆ ಎಂ.ಫಿಲ್ ಪದವಿ ಪಡೆದಿದ್ದಾರೆ. ಕನ್ನಡ ಕಥಾ ಸಾಹಿತ್ಯ ಕುರಿತು ಪಿಎಚ್.ಡಿ. ಪದವಿ ಪಡೆದಿದ್ದರು. ಕೈಲಾಸಾಧಿಪತಿಯ ಮನೆಯಂಗಳದಲ್ಲಿ (2007) ಅವರ ಪ್ರಕಟಿತ ಪ್ರವಾಸ ಕಥನ. ಮುಂಬೈ ಕನ್ನಡ ಲೇಖಕಿಯರ ಬಳಗ ’ಸೃಜನಾ’ದ ಮಾಜಿ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯಾಗಿದ್ದರು. ...
READ MORE