ಗಾಳಿ ಹಿಡಿದ ಸುಗಂಧ- ಬೇಂದ್ರೆ ಕಾವ್ಯ ಕುರಿತಾದ ಅಸಂಖ್ಯ ಒಳನೋಟಗಳ ಪುಟ್ಟ ಹೊತ್ತಿಗೆ. ಕುಸುಮಾಕರ ದೇವರಗೆಣ್ಣೂರರ ಅವರ ಬೇಂದ್ರೆ ಅವರ ಜೊತೆಗಿನ ಒಡನಾಟದ ಅನುಭವದ ಕಥನ ಬೇಂದ್ರೆಯವರೊಂದಿಗೆ ಸಂವಾದಿಸಿದ ದಟ್ಟ ಅನುಭವವನ್ನು ಈ ಬರಹ ನೀಡುತ್ತದೆ.
ಕನ್ನಡದ ವಿಶಿಷ್ಟ ಕಾದಂಬರಿಕಾರ ಕುಸುಮಾಕರ ದೇವರಗೆಣ್ಣೂರ ಅವರ ಮೂಲ ಹೆಸರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಸಂತ ಅನಂತ ದಿವಾಣಜಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. 1956ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡದ ಕವಿ ದಾ.ರಾ.ಬೇಂದ್ರೆ ಅವರ ನಿಕಟ ಸಂಪರ್ಕ ವಸಂತ ದಿವಾಣಜಿ ಅವರಿಗೆ ಸುಮಾರು 12 ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಸಿಕ್ಕಿತ್ತು. ಸೊಲ್ಲಾಪುರಕ್ಕೆ ...
READ MORE