ದೂರ್ವಾಂಕುರ

Author : ಆನಂದ ಝಂಜರವಾಡ

Pages 180

₹ 100.00




Year of Publication: 2014
Published by: ಪ್ರಸಾರಾಂಗ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌
Address: ಸಾಧನಕೇರಿ, ಧಾರವಾಡ-8

Synopsys

ವರಕವಿ ಬೇಂದ್ರೆಯವರು ಒಂದು ತಪದ ಹೊತ್ತು ಅಂದರೆ ಹನ್ನೆರಡು ವರ್ಷದ ಕಾಲ ಸೊಲ್ಲಾಪುರದಲ್ಲಿ ಪ್ರಾಧ್ಯಾಪಕರಾಗಿದ್ದರು. ಆ ಅವಧಿಯಲ್ಲಿ ವೈಯಕ್ತಿಕ ನೆಲೆಯಲ್ಲಿ ಅವರು ಕವಿತೆಗಳ ರಚನೆಯಲ್ಲಿ ತೊಡಗಿದ್ದರ ಜತೆಗೇ ಮರಾಠಿ ಜನಸಮುದಾಯದೊಂದಿಗೆ ಸ್ನೇಹ-ಬಾಂಧವ್ಯವನ್ನಿಟ್ಟುಕೊಂಡು ಉಪನ್ಯಾಸ, ಸಂವಾದ, ಸಾಮಾಜಿಕ ಸಂವಚನಗಳನ್ನು ನಡೆಸುತ್ತಿದ್ದರು. ಜ್ಞಾನಪಿಪಾಸುವಾಗಿ ಬೇಂದ್ರೆಯವರು ದೈನಂದಿನ ಜೀವನದ ಆಗುಹೋಗುಗಳಲ್ಲಿಯೂ ಆಸಕ್ತರಾಗಿ ಮರಾಠಿ ಜನಮನದ ಮೇಲೆ ಬೀರಿದ ಸಾಂಸ್ಕೃತಿಕ ಪ್ರಭಾವ ಅವಿಸ್ಮರಣೀಯ. ಆಗಿನ ಅನೇಕ ಮರಾಠಿ ಲೇಖಕರು ತಮಗಿದ್ದ ಅಪೂರ್ವ ಸ್ಮರಣೆಗಳನ್ನು ಬರೆದು ತಮ್ಮ ಧನ್ಯತಾಭಾವವನ್ನು ತೋರಿದ್ದಕ್ಕೆ ಸಾಕ್ಷಿಯಾಗಿದೆ ಈ ದೂರ್ವಾಂಕುರ. ಇಲ್ಲಿ ಮರಾಠಿ ಲೇಖಕರು ಬೇಂದ್ರೆಯವರನ್ನು ಸ್ಮರಿಸಿ ಗೌರವಿಸಿ ಬರೆದ 23 ಲೇಖನಗಳಿವೆ. ಜೊತೆಗೆ ಬೇಂದ್ರೆಯವರು ಸೊಲ್ಲಾಪುರದಲ್ಲಿದ್ದಾಗಿನ ತಮ್ಮ ಜೀವನವನ್ನು ನೆನೆದಿದ್ದಾರೆ.

About the Author

ಆನಂದ ಝಂಜರವಾಡ
(25 June 1952)

ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿ ಕ್ಷೇತ್ರ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ?  ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ಇವರ ಬನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. 'ಎಲ್ಲಿದ್ದಾನೆ ಮನುಷ್ಯ' ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ. ...

READ MORE

Related Books