ಚಂದ್ರಮಾನ

Author : ವಿವಿಧ ಲೇಖಕರು

Pages 212

₹ 250.00




Year of Publication: 2012
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಚಂದ್ರಮಾನ’ ಕೃತಿಯು ನಾಗತಿಹಳ್ಳಿ ಚಂದ್ರಶೇಖರ ಅವರ ಬದುಕು - ಬರಹ - ಆಸಕ್ತಿ - ಸಾಧನೆ ಕುರಿತ ವಿಮರ್ಶಾ ಸಂಕಲನವಾಗಿದೆ. ಕೃತಿಯನ್ನು ಶಿಲ್ಪಶ್ರೀ ಹರವು ಹಾಗೂ ಶಿವಕುಮಾರ ಕಾರೇಪುರ ಅವರು ಸಂಪಾದಿಸಿದ್ದಾರೆ. ನಾಗತಿಹಳ್ಳಿಯವರದ್ದು ಸ್ವತಂತ್ರ ಯೋಚನೆ, ನಿರ್ಭಯ ಸ್ವಭಾವ. ಯಾರೂ ಬಂಧಿಸಿಡಲಾಗದ, ಚೌಕಟ್ಟಿನಿಂದಾಚೆಗೆ ಜಿಗಿದು ಎತ್ತರಕ್ಕೆ ಬೆಳೆಯುವ ವ್ಯಕ್ತಿತ್ವ ಇವರು ಸಂದರ್ಶಿಸಿದ ದೇಶ-ವಿದೇಶಗಳ ವಿವರ-ಪ್ರವರಗಳು ಪ್ರವಾಸ ಕಥನಗಳಾಗಿ ನಮ್ಮನ್ನೂ ತಲುಪಿವೆ. ಓದುತ್ತಿದ್ದರೆ ನಾವಿಲ್ಲಿರುತ್ತೇವೆ; ನಮ್ಮ ಮನಸ್ಸು ಅವರು ಹೋದಲ್ಲೆಲ್ಲ ಗಿರಕಿ ಹೊಡೆಯುತ್ತಿರುತ್ತದೆ. ಇವರು ಮೆಟ್ಟಿದ ಮೊದಲ ವಿದೇಶಿ ನೆಲ ಫ್ರಾನ್ಸ್. ಇಲ್ಲಿ ಇವರನ್ನು ಸತ್ಕರಿಸಲು ನಿಯೋಜಿತರಾದ ಫ್ರೆಂಚ್ ದಂಪತಿಗಳು 'ನ್ಯಗಾತಿ ಹ್ಯಾಲಿ ಚಾಂದ್ ಶಿಕಾ‌' ಎಂದು ಬರೆದ ಫಲಕ ಹಿಡಿದು. ಇವರ ಗಮನ ಸೆಳೆದು ಅತಿಥಿಯನ್ನು ಕರೆದೊಯ್ದರಂತೆ ! ಇದಲ್ಲವೇ ದೇಶ ಭಾಷೆಯನ್ನೂ ಮೀರಿದ ಪ್ರೀತಿ! ಭಾರತ ದೇಶದಲ್ಲಿ ಯುವತಿಯೊಬ್ಬಳು ಅರ್ಧರಾತ್ರಿಯಲ್ಲಿ ನಿರ್ಭಿತಳಾಗಿ ರಸ್ತೆಯಲ್ಲಿ ಸಂಚರಿಸುವಂಥ ದಿನ ಬಂದೀತೇ ಎಂಬ ಪ್ರಶ್ನೆ ಕಾಡಿದ್ದೂ ಕೂಡ ಅರ್ಧರಾತ್ರಿಯಲ್ಲೇ ! ತಮ್ಮ ಫ್ರಾನ್ಸ್ ಪ್ರವಾಸಕಾಲದಲ್ಲಿ, ತಮ್ಮೊಂದಿಗೆ ಇಷ್ಟು ಹೊತ್ತೂ ಅದೂ ಇದೂ ಮಾತಾಡುತ್ತಿದ್ದ ನರ್ಸೊಬ್ಬಳು ತನ್ನ ಸ್ಟೇಷನ್ ಬಂದೊಡನೆ ಸರಿರಾತ್ರಿಯಲ್ಲಿ ಒಬ್ಬಳೇ ಇಳಿದು ಹೋದಳಂತೆ. ಹೌದು, ಭಾರತೀಯರಿಗೆ ಇದು ಶಾಕ್ ನ್ಯೂಸ್ ! ಇವರು ತಮ್ಮ ಧಾರಾವಾಹಿಯಲ್ಲಿ ನಾಯಕಿ ಡಾಕ್ಟರ್ ಅರ್ಧರಾತ್ರಿಯಲ್ಲಿ ರಸ್ತೆಗಿಳಿದು ತನ್ನ ಡ್ಯೂಟಿ ಮುಗಿಸಿ ಹಿಂದಿರುಗುವಾಗ ಭಾರತದಲ್ಲೇನಾಗಬಹುದೆಂದೂ ಚಿತ್ರಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Reviews

(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)

ನಾಗತಿಹಳ್ಳಿ ಚಂದ್ರಶೇಖರ್ ಅವರ ಜನ್ಮದಿನಾಂಕ ಆಗಸ್ಟ್ 15. ಅದು ಸರಿರಾತ್ರಿಯಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಘೋಷಿಸಿ ಸೂರ್ಯೋದಯಕ್ಕೆ ಮುಂಚೆ ಬ್ರಿಟಿಷರು ಪೇರಿ ಕಿತ್ತ ದಿನ, ನಾಗತಿಹಳ್ಳಿಯವರದ್ದು ಸ್ವತಂತ್ರ ಯೋಚನೆ, ನಿರ್ಭಯ ಸ್ವಭಾವ. ಯಾರೂ ಬಂಧಿಸಿಡಲಾಗದ, ಚೌಕಟ್ಟಿನಿಂದಾಚೆಗೆ ಜಿಗಿದು ಎತ್ತರಕ್ಕೆ ಬೆಳೆಯುವ ವ್ಯಕ್ತಿತ್ವ ಇವರು ಸಂದರ್ಶಿಸಿದ ದೇಶ-ವಿದೇಶಗಳ ವಿವರ-ಪ್ರವರಗಳು ಪ್ರವಾಸ ಕಥನಗಳಾಗಿ ನಮ್ಮನ್ನೂ ತಲುಪಿವೆ. ಓದುತ್ತಿದ್ದರೆ ನಾವಿಲ್ಲಿರುತ್ತೇವೆ; ನಮ್ಮ ಮನಸ್ಸು ಅವರು ಹೋದಲ್ಲೆಲ್ಲ ಗಿರಕಿ ಹೊಡೆಯುತ್ತಿರುತ್ತದೆ. ಇವರು ಮೆಟ್ಟಿದ ಮೊದಲ ವಿದೇಶಿ ನೆಲ ಫ್ರಾನ್ಸ್. ಇಲ್ಲಿ ಇವರನ್ನು ಸತ್ಕರಿಸಲು ನಿಯೋಜಿತರಾದ ಫ್ರೆಂಚ್ ದಂಪತಿಗಳು 'ನ್ಯಗಾತಿ ಹ್ಯಾಲಿ ಚಾಂದ್ ಶಿಕಾ‌' ಎಂದು ಬರೆದ ಫಲಕ ಹಿಡಿದು. ಇವರ ಗಮನ ಸೆಳೆದು ಅತಿಥಿಯನ್ನು ಕರೆದೊಯ್ದರಂತೆ ! ಇದಲ್ಲವೇ ದೇಶ ಭಾಷೆಯನ್ನೂ ಮೀರಿದ ಪ್ರೀತಿ! ಭಾರತ ದೇಶದಲ್ಲಿ ಯುವತಿಯೊಬ್ಬಳು ಅರ್ಧರಾತ್ರಿಯಲ್ಲಿ ನಿರ್ಭಿತಳಾಗಿ ರಸ್ತೆಯಲ್ಲಿ ಸಂಚರಿಸುವಂಥ ದಿನ ಬಂದೀತೇ ಎಂಬ ಪ್ರಶ್ನೆ ಕಾಡಿದ್ದೂ ಕೂಡ ಅರ್ಧರಾತ್ರಿಯಲ್ಲೇ ! ತಮ್ಮ ಫ್ರಾನ್ಸ್ ಪ್ರವಾಸಕಾಲದಲ್ಲಿ, ತಮ್ಮೊಂದಿಗೆ ಇಷ್ಟು ಹೊತ್ತೂ ಅದೂ ಇದೂ ಮಾತಾಡುತ್ತಿದ್ದ ನರ್ಸೊಬ್ಬಳು ತನ್ನ ಸ್ಟೇಷನ್ ಬಂದೊಡನೆ ಸರಿರಾತ್ರಿಯಲ್ಲಿ ಒಬ್ಬಳೇ ಇಳಿದು ಹೋದಳಂತೆ. ಹೌದು, ಭಾರತೀಯರಿಗೆ ಇದು ಶಾಕ್ ನ್ಯೂಸ್ ! ಇವರು ತಮ್ಮ ಧಾರಾವಾಹಿಯಲ್ಲಿ ನಾಯಕಿ ಡಾಕ್ಟರ್ ಅರ್ಧರಾತ್ರಿಯಲ್ಲಿ ರಸ್ತೆಗಿಳಿದು ತನ್ನ ಡ್ಯೂಟಿ ಮುಗಿಸಿ ಹಿಂದಿರುಗುವಾಗ ಭಾರತದಲ್ಲೇನಾಗಬಹುದೆಂದೂ ಚಿತ್ರಿಸಿದ್ದಾರೆ. ಪೂರ್ವಿ ಕಥೆಯ ನಾಯಕಿ ಸದ್ದಿಲ್ಲದೆ ಒಂಟಿಯಾಗಿ ದೇಶ ಬಿಟ್ಟು ವಿದೇಶಕ್ಕೆ ಹಾರುವುದೂ ಅರ್ಧರಾತ್ರಿಯಲ್ಲೇ ! ಇವರ ಕಥೆ, ಧಾರಾವಾಹಿ, ಸಿನೆಮಾ ನಾಯಕಿ ಬಲು ದಿಟ್ಟೆ! ಅಳುಬುರುಕಿಯಲ್ಲ. ಸಂಪ್ರದಾಯದ ಚೌಕಟ್ಟಿನಿಂದ ಸಿಡಿದು ನಿಂತವಳು. ಈ ಮೇಷ್ಟ್ರು ನಾಲ್ಕು ಗೋಡೆಗಳ ಮಧ್ಯೆ ತರಗತಿಯಲ್ಲಿ ಮಾಡಿದ ಪಾಠಕ್ಕಿಂತಲೂ ಕೃತಿಗಳ ಮೂಲಕ ಸಮಾಜಕ್ಕೆ ಹೇಳಿದ ಪಾಠ - ನೀಡಿದ ಸಂದೇಶ ಹೆಚ್ಚು ಪವರ್‌ಫುಲ್ !!

Related Books