ಕನ್ನಡ ಸಂಸ್ಕೃತಿಯು ಬೃಹತ್ತಾಗಿ ನೆಲೆ ನಿಂತ ಕಾಲ, 1970ರ ದಶಕ. ಈ ಕಾಲದಲ್ಲಿ ಕನ್ನಡ ರಂಗಭೂಮಿಯ ಅತಿ ದೊಡ್ಡದಾಗಿ, ವಿಶಿಷ್ಟತೆಯಿಂದ ತನ್ನ ಬಾಹುಗಳನ್ನು ಹೇಗೆ ಚಾಚಿತು ಎಂದು ಲೇಖಕರು ವಿವರದೊಂದಿಗೆ ನೀಡಿದ್ದಾರೆ.
ಹೊಸ ಜನಾಂಗ ರಂಗಭೂಮಿಯನ್ನು ಪ್ರವೇಶಿಸಿದ್ದು, ಹೊಸ ತಾಂತ್ರಿಕತೆಯ ಆವಿಷ್ಕಾರ, ಹೊಸ ಆಯಾಮದ ಸೃಷ್ಟಿ; ಮುಖ್ಯವಾಗಿ ಬಿ.ವಿ.ಕಾರಂತರು ಕರ್ನಾಟಕದಲ್ಲಿ ನೆಲೆಸಲು ನಿರ್ಧರಿಸಿದ್ದ ಮಾಹಿತಿಗಳು ಇಲ್ಲಿವೆ.
ಪುಸ್ತಕ ಆ ದಶಕದ ರಂಗಭೂಮಿಯ ಸಮಸ್ತ ಚಿತ್ರಣ ನೀಡಿದ್ದು, ಅಪರೂಪದ, ಘಟನೆಗಳು ಮತ್ತು ಆಕರ್ಷಕ ಭಾಷೆ ಈ ಪುಸ್ತಕದ ಸರಕು.
ಪತ್ರಕರ್ತ ಎನ್.ಕೆ. ಮೋಹನರಾಂ ಅವರು ಕರ್ನಾಟಕದ ಹಿರಿಯ ಪತ್ರಕರ್ತರಲ್ಲಿ ಒಬ್ಬರು. ಲಂಕೇಶ್ ಅವರ ಒಡನಾಡಿಯಾಗಿದ್ದ ಮೋಹನರಾಂ ಅವರು ಲಂಕೇಶ್, ಜಯಲಲಿತಾ, ರಾಮಾನುಜಾಚಾರ್ಯ ಅವರನ್ನು ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಬಳಸುವ ಭಾಷೆ, ವಿಚಾರಗಳ ಬೌದ್ಧಿಕ ಭಾರದಿಂದ ಕುಸಿಯಕೂಡದು, ಅದನ್ನು ಹೇಳುವ ಕ್ರಮ ನೇರ, ಸರಳ, ಚೇತೋಹಾರಿಯಾಗಿರಬೇಕು: ಲಂಕೇಶರಿಂದ ಇದನ್ನು ಕಲಿತ ಮೋಹನ್ ರಾಂ ಅದನ್ನು ತಮ್ಮ ಪುಸ್ತಕದಲ್ಲಿ ಮುಂದುವರೆಸಿದ್ದಾರೆ. ...
READ MORE