ಭಾವಗೀತೆ- ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರ ಪುಸ್ತಕ ಮಾಲೆಯಲ್ಲಿ ಪ್ರಕಟವಾದ ಕೃತಿ. ಎಸ್.ವಿ.ಪರಮೇಶ್ವರ ಭಟ್ಟ ಅವರ ಪ್ರಬಂಧ ಲೇಖನದ ಕೃತಿ. ಮಂಡ್ಯ, ಬಳ್ಳಾರಿಗಳಲ್ಲಿ ಅವರು ಮಾಡಿದ ಪ್ರಚಾರೋಪನ್ಯಾಸವನ್ನು ಇಲ್ಲಿ ನೀಡಲಾಗಿದೆ. ನಾಲ್ಕು ಮುದ್ರಣಗಳಲ್ಲಿ ಪ್ರಕಟಗೊಂಡಿರುವ ಭಾವಗೀತೆ ಕೃತಿ ಪ್ರಚಾರ ಪುಸ್ತಕ ಮಾಲೆಯ ಅತ್ಯಂತ ಜನಪ್ರಿಯ ಕಿರುಹೊತ್ತಿಗೆ ಎಂಬ ಹೆಗ್ಗಳಿಕೆೆಗೆ ಪಾತ್ರವಾಗಿದೆ.
ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು 18-02-1914 ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಸದಾಶಿವರಾಯರು ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಪರಮೇಶ್ವರ ಭಟ್ಟರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಡುತ್ತಿದ್ದರು. ಅವನ ...
READ MORE