ಬೇಂದ್ರೆಯವರ ಕಾವ್ಯಭಾಷೆ

Author : ಬಿ.ಬಿ. ರಾಜಪುರೋಹಿತ

Pages 40

₹ 8.00




Year of Publication: 1998
Published by: ಪ್ರಸಾರಂಗ
Address: ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-580003

Synopsys

ಬೇಂದ್ರೆಯವರ ಕಾವ್ಯ ಭಾಷೆ- ಧಾರವಾಡದ ಕೀರ್ತಿ ಶಿಖರಗಳಲ್ಲಿ ಒಂದು ಡಾ.ಡಿ.ಸಿ.ಪಾವಟೆಯವರು ನಿರ್ಮಿಸಿದ ಕರ್ನಾಟಕ ವಿಶ್ವವಿದ್ಯಾಲಯ, ಇನ್ನೊಂದು ಡಾ.ದ.ರಾ.ಬೇಂದ್ರೆಯವರು ಸೃಷ್ಟಿಸಿರುವ ಕಾವ್ಯ. ಈ ಕಾರಣ ಬೇಂದ್ರೆಯವರ ಜನ್ಮದಿನವಾದ ಜನೆವರಿ 31 ನ್ನು ಕವಿದಿನ ಎಂದು ಆಚರಿಸುವ ಪದ್ಧತಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಆದರಣೀಯವಾಗಿ ಆಚರಿಸುತ್ತಾ ಬಂದಿದೆ.

ಕವಿದಿನದ ಮೊಟ್ಟ ಮೊದಲ ಭಾಷಣ ದಿನಾಂಕ 31-1-1983 ರಂದು ನಡೆದಿದ್ದು, ಕನ್ನಡದ ಖ್ಯಾತ ಮೇಧಾವಿಗಳು ಭಾರತ ಸಿಂಧುರಶ್ಮಿ ಎಂಬ ಮಹಾಕಾವ್ಯದ ಕರ್ತೃಗಳೂ ಆದ ಡಾ.ವಿ.ಕೃ.ಗೋಕಾಕ ಅವರು ಮಾತನಾಡಿದ್ದರು. ಅದರಂತೆ ಪ್ರತೀ ವರ್ಷವೂ ನಾಡಿನ ಮೇಧಾವಿಗಳಿಂದ ಬೇಂದ್ರೆಯವರನ್ನು ಕುರಿತು ಭಾಷಣವನ್ನು ಮಾಡಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಾ ಬಂದಿದೆ. ಅದೇ ರೀತಿಯಲ್ಲಿ ದಿನಾಂಕ 31-01-1998 ರಂದು ಬೇಂದ್ರೆಯವರ ಒಡನಾಟವಿದ್ದ ಭಾಷಾತಜ್ಞ ಡಾ.ಬಿ.ಬಿ.ರಾಜಪುರೋಹಿತ ಅವರು ನೀಡಿದ ಉಪನ್ಯಾಸದ ಲಿಖಿತ ರೂಪವಿದು. ಡಾ. ರಾಜಪುರೋಹಿತರು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಪ್ರಾಧ್ಯಾಪಕ ಹಾಗೂ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಟೊಕಿಯೋ ವಿಶ್ವವಿದ್ಯಾಲಯದಲ್ಲಿ ವಿದೇಶಿ ಅಧ್ಯಯನದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ತಿರುವಂತಪುರದ ದ್ರಾವಿಡ ಭಾಷಾ ಶಾಸ್ತ್ರಗಳ ಅಂತಾರಾಷ್ಟ್ರೀಯ ಸಂಸ್ಥೆಯಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.  

 

About the Author

ಬಿ.ಬಿ. ರಾಜಪುರೋಹಿತ
(20 May 1935 - 24 June 2020)

ಭಾಷಾ ವಿಜ್ಞಾನಿ ಬಿ.ಬಿ. ರಾಜಪುರೋಹಿತ  ಅವರು  ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. 1935ರ ಮೇ 20ರಂದು ಜನಿಸಿದರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪಡೆದಿರುವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. A ...

READ MORE

Related Books