ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಚಾರೋಪನ್ಯಾಸ ಮಾಲೆ ಹಾಗೂ ಪುಸ್ತಕ ಪ್ರಕಟಣೆಯ ಭಾಗವಾಗಿ ಡಾ.ಜಿ.ಕೃಷ್ಣಪ್ಪ ಅವರ "ಬೇಂದ್ರೆ ಕಾವ್ಯ’ ಪ್ರಕಟಿಸಿದೆ. ಕನ್ನಡ ನವೋದಯ ಪರಂಪರೆಯನ್ನು ರೂಪಿಸಿದವರ ಪೈಕಿ ದ.ರಾ.ಬೇಂದ್ರೆ ಪ್ರಮುಖರು. ಕನ್ನಡ ನಾಡು-ನುಡಿಯ ಚಿಂತನೆಯೊಂದಿಗೆ ಜೀವನ ಮೌಲ್ಯಗಳ ದರ್ಶನವನ್ನು ತಮ್ಮ ಕಾವ್ಯದಲ್ಲಿ ಮೂಡಿಸಿದ್ದು, ಕನ್ನಡ ಕಾವ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಬೇಂದ್ರೆ ಕಾವ್ಯದಲ್ಲಿಯ ಜೀವನ ಮೌಲ್ಯಗಳು ಜನಾಂಗವನ್ನು ರೂಪಿಸುವ ಶಕ್ತಿವರ್ಧಕಗಳಾಗಿವೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಬೇಂದ್ರೆ ಜೀವನ ಪರಿಚಯದೊಂದಿಗೆ ಆರಂಭವಾಗಿ ಸಖಿಗೀತ, ಪ್ರೇಮಗೀತೆಗಳು, ಪ್ರಕೃತಿಗೀತೆಗಳು, ಆತ್ಮದ ಅರಿವಿನ ಗೀತೆಗಳು ಹೀಗೆ ವಿಭಾಗಗಳನ್ನು ಮಾಡುವ ಮೂಲಕ ಅವರ ಸಾಹಿತ್ಯ ಆಧರಿಸಿ ಬೇಂದ್ರೆ ಅವರನ್ನು ಓದುಗರಿಗೆ ದರ್ಶನ ಮಾಡಿಸುವುದು ಲೇಖಕರ ಉದ್ದೇಶವೇ ಈ ಕೃತಿ.
’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್ಎಲ್ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ ಬರವಣಿಗೆಗೆ ...
READ MORE