‘ಬಸವರಾಜ ಕಟ್ಟೀಮನಿ ಕಾದಂಬರಿಗಳ ಸಮೀಕ್ಷೆ- 2’ ಬಸವರಾಜ ಕಟ್ಟೀಮನಿ ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಪ್ರಕಟವಾದ ಕೃತಿ. ಡಾ. ರಾಮಕೃಷ್ಣ ಮರಾಠೆ ಅವರು ಸಂಪಾದಿಸಿದ್ದಾರೆ. ಕಟ್ಟೀಮನಿಯವರ 40 ಕಾದಂಬರಿಗಳನ್ನು ನಾಲ್ಕು ಸಂಪುಟಗಳಲ್ಲಿ ವಿಭಾಗಿಸಲಾಗಿದ್ದು ಈ ಕೃತಿ ಎರಡನೇ ವಿಭಾಗಕ್ಕೆ ಸೇರಿದೆ. ಕಟ್ಟೀಮನಿ ಅವರ ಸಮಗ್ರ ಸಂಪುಟಗಳು ಹೊರಬಂದ ಬಳಿಕ ಅವರ 40 ಕಾದಂಬರಿಗಳನ್ನು ಕುರಿತ 40 ಲೇಖಕರಿಂದ ಪ್ರತ್ಯೇಕ ಲೇಖನಗಳನ್ನು ಬರೆಯಿಸಿ ಪ್ರಕಟಿಸುತ್ತಿರುವುದು ಇದೇ ಮೊದಲ ಬಾರಿ ಎನ್ನುತ್ತಾರೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ.
ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ. ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...
READ MORE