ಅರ್ಥಲೋಕ

Author : ಜಿ.ಎಸ್. ಆಮೂರ

Pages 188

₹ 150.00




Year of Publication: 2020
Published by: ಪ್ರಿಯದರ್ಶಿನಿ ಪ್ರಕಾಶನ
Address: # 138, 7ನೇ ಸಿ ಮುಖ್ಯರಸ್ತೆ, ಹಂಪಿನಗರ ಬೆಂಗಳೂರು-560104

Synopsys

ಅರ್ಥಲೋಕ-ಕೃತಿಯು ಸಮೀಕ್ಷಾತ್ಮಕ ಸ್ವರೂಪದ ಲೇಖನಗಳ ಸಂಕಲನ. ಒಟ್ಟು 18 ಲೇಖನಗಳಿವೆ. ಆ ಪೈಕಿ, ಕನ್ನಡದ 10 ಕಾದಂಬರಿಗಳನ್ನು (ಮಾಡಿದ್ದುಣ್ಣೊ ಮಹಾರಾಯ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಸುಬ್ಬಣ್ಣ, ಗಂಗವ್ವ ಮತ್ತು ಗಂಗಾಮಾಯಿ,ಶಿಕಾರಿ, ಚೋಮನ ದುಡಿ, ಮುಲ್ಕ್ ರಾಜ್ ಆನಂದ ಅವರ ಅಸ್ಪೃಶ್ಯ ಮತ್ತು ಇತರೆ) ತೌಲನಿಕ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಚದುರಂಗರ ಆವಸ್ಥೆ, ನಿರಂಜನರ ವಿಮೋಚನೆ, ಕುವೆಂಪು ಅವರ ಶ್ರೀರಾಮಾಯಣಂ ದರ್ಶನಂ’, ಬೇಂದ್ರೆ ಕಾವ್ಯದಲ್ಲಿ ಪ್ರಜ್ಞೆ ಮತ್ತು ಪ್ರಯೋಗ, ಅಡಿಗರ ಚಿಂತಾಮಣಿಯಲ್ಲಿ ಕಂಡ ಮುಖ, ಶ್ರೀರಂಗರ ‘ಕತ್ತಲೆ ಬೆಳಕು ನಾಟಕವನ್ನೂ, ಡಿವಿಜಿ ಅವರ ಮ್ಯಾಕ್ ಬೆತ್ ನಾಟಕದ ಅನುವಾದವನ್ನೂ ವಿಶ್ಲೇಷಿಸಿದ್ದಾರೆ. ವಿಮರ್ಶೆಗೆ ಬಂದ ಆಪತ್ತು ಲೇಖನದಲ್ಲಿ ಇಂದಿನ ವಿಮರ್ಶೆ ಪಡೆಯುತ್ತಿರುವ ಅನಾಹುತಕಾರಿ ಸ್ವರೂಪಗಳ ಬಗ್ಗೆಯೂ ಎಚ್ಚರಿಸುತ್ತಾರೆ.

ಕೃತಿಯ ಕುರಿತು ಖ್ಯಾತ ವಿಮರ್ಶಕ ಡಾ. ಡಿ.ಆರ್. ನಾಗರಾಜ್ ಅವರು ‘ಆಮೂರರ ಕೃತಿ ರಚನೆ ಶ್ರಮದ ಹಿಂದೆ ಹಲವು ಸಾಹಿತ್ಯಗಳ ಜ್ಞಾನ ಕೆಲಸ ಮಾಡುತ್ತಿರುತ್ತದೆ. ವಿದ್ವತ್ತಿನ ವ್ಯಾಪಕತೆ ಇರದ ಬರಿಯ ಉತ್ಕಟ ರಸಪ್ರಜ್ಞೆಯ ವಿಮರ್ಶೆಗಿಂತ ಈ ರೀತಿಯ ವಿಮರ್ಶೆ ನಮ್ಮ ಕೃತಿಗಳ ಅನನ್ಯತೆಯನ್ನು ಹೆಚ್ಚು ಖಚಿತವಾಗಿ ಬೆಳಕಿಗೆ ತರುತ್ತದೆ. ಈ ಕೃತಿಯಲ್ಲಿ ಆಮೂರರು ಬರೆದಿರುವ ವೈವಿಧ್ಯಮಯ ಆಸಕ್ತಿಯ ವಿವಿಧ ಲೇಖನಗಳಿವೆ. ಆ ಫೈಕಿ, ಕಾವ್ಯ, ಕಾದಂಬರಿ, ಸಣ್ಣ ಕಥೆ, ಭಾಷಾಂತರ...ಹೀಗೆ. ಕನ್ನಡ ಕಥನ ಪರಂಪರೆ, ಕನ್ನಡ ಕಾದಂಬರಿ ಪರಂಪರೆ ಇಂತಹ ಲೇಖನಗಳು ಮೌಲಿಕವಾದವು. ಈ ಬಗೆಯ ಲೇಖನಗಳು ಉತ್ತಮ ಚರ್ಚೆಯನ್ನು ಹುಟ್ಟು ಹಾಕುತ್ತವೆ. ಚರ್ಚೆಯ ಅನನ್ಯತೆಯನ್ನು ಸೃಷ್ಟಿಸುವುದು ಉತ್ತಮ ವಿಮರ್ಶಕನ ಲಕ್ಷಣವೂ ಆಗಿದೆ.’ ಎಂದು ಪ್ರಶಂಸಿಸಿದ್ದಾರೆ. ಅರ್ಥಲೋಕ ಕೃತಿಯು ವಿಮರ್ಶೆ ಅಧ್ಯಯನ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಉತ್ತಮ ಆಕರ ಗ್ರಂಥವಾಗಿದೆ. ಈ ಕೃತಿಯು ಮೊದಲು 1998 ಹಾಗೂ 2010ರಲ್ಲಿ ಮುದ್ರಣ ಕಂಡಿತ್ತು.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books