ಅನುಸರಣ

Author : ಪ್ರಹ್ಲಾದ ಅಗಸನಕಟ್ಟೆ

Pages 240

₹ 165.00




Published by: ಕಾಲ ಪ್ರಕಾಶನ
Address: ನಂ. 39/3, ಕೆಳಮಹಡಿ, 9ನೇ ಮೇನ್, ಶಿವನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ, ಬೆಂಗಳೂರು-560020

Synopsys

ಕತೆಗಾರರಾಗಿ ಹೆಸರು ಮಾಡಿರುವ ಪ್ರಹ್ಲಾದ ಅಗಸನಕಟ್ಟೆ ಅವರ ಗದ್ಯ ಬರಹಗಳ ಸಂಕಲನ. ’ಅನುಸರಣ’ ಸಂಕಲನದಲ್ಲಿ ಇಪ್ಪತ್ತೆಂಟು ವಿಮರ್ಶಾ ಲೇಖನ, ಒಂಬತ್ತು ಚಿಂತನ ಬರಹಗಳು ಸೇರಿವೆ. ಪುಸ್ತಕ ಬರಹಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಈ ಕೃತಿಯಲ್ಲಿ ಕಾವ್ಯ, ಕಥೆ, ಕಾದಂಬರಿ, ಲೇಖನ, ಒಡನಾಟ, ಸಂವಾದ, ಚಿಂತನೆ ಕುರಿತ ಬರಹಗಳನ್ನು ಒಳಗೊಂಡಿದೆ. ವಿಷಯ ವೈವಿಧ್ಯದಿಂದ ಕೂಡಿದೆ. ವಿಷಯ ಅಥವಾ ಕೃತಿಯನ್ನು ಚರ್ಚಿಸುವಾಗ ಅದಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ವಿವರಿಸಿ ಅದರ ಧೋರಣೆ- ಆಶಯ ಗುರುತಿಸಲಾಗಿದೆ. ಬರಹಗಳು ಸಹಾನುಭೂತಿಯಿಂದ ಕೂಡಿರುವುದರಿಂದ ಓದಿಗೆ ಒಂದು ಆಪ್ತತೆ ಮತ್ತು ಗಾಂಭೀರ್ಯ ದೊರಕುತ್ತದೆ.

About the Author

ಪ್ರಹ್ಲಾದ ಅಗಸನಕಟ್ಟೆ
(03 June 1956 - 06 September 2016)

ಕವಿ, ಸಾಹಿತಿ, ಕತೆಗಾರ ಪ್ರಹ್ಲಾದ ಅಗಸನಕಟ್ಟೆ ಅವರು ಜನಿಸಿದ್ದು 1956 ಜೂನ್ 3ರಂದು ದಾವಣಗೆರೆಯ ಅಗಸನಕಟ್ಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಉಪನ್ಯಾಸಕರಾಗಿ ಹಾಗೂ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ನನ್ನ ದಣಿಗೆ ನನ್ನ ದನಿ, ಗಲ್ಲುಗಳಲ್ಲಿ ಗುಲಾಬಿ, ಸಂತೆ ಮುಗಿಯುವ ಸಮಯ, ದೀಪವಾರಿದ ಮೇಲೆ, ಸಾವಿನೊಳಗಿನ , ದೇವರ ಸವಾಲ್, ಪ್ರಕುಬ್ದ ಅಲೆಗಳು, ಬಂದೀಖಾನೆ, ಅವಾಂತರ, ಎದುರು ಬದುರು, ಕುತೂಹಲ, ಮುಂತಾದವು. ಇವರ ಮನದ ಮುಂದಣ ಮಾಯೆ' ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ...

READ MORE

Related Books